web stats

Madhugirinews

#1NewsofMadhugiri

ಕೊಡಿಗೇನಹಳ್ಳಿ ಗ್ರಾಪಂನ 42 ಅಂಗಡಿ ಮಳಿಗೆಗಳ 37 ಲಕ್ಷ ಬಾಡಿಗೆ ಬಾಕಿ

ಮಧುಗಿರಿ: ಕೊಡಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಬಾಡಿಗೆದಾರರು ಸುಮಾರು ವರ್ಷಗಳಿಂದ ಅಂಗಡಿ ಬಾಡಿಗೆ ಪಾವತಿಸದ ಕಾರಣ ಗ್ರಾಪಂ ಅಧಿಕಾರಿಗಳು 42 ಅಂಗಡಿ ಮಳಿಗೆಗೆ ನೋಟಿಸ್ ನೀಡಿ 15 ದಿನ ಗಡುವುದು ನೀಡಿದ್ದಾರೆ.

ತಾಲೂಕಿನ ಕೊಡಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂ ವತಿಯಿಂದ ನಿರ್ಮಿಸಿರುವ 42 ಅಂಗಡಿ ಮಳಿಗೆಗಳ ಬಾಡಿಗೆ ಸುಮಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದು ಸುಮಾರು 37 ಲಕ್ಷ ವಸೂಲಿ ಬಾಕಿ ಇರುವ ಹಿನ್ನೆಲೆಯಲ್ಲಿ ಗ್ರಾಪಂ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಕೆಲ ಅಂಗಡಿ ಮಳಿಗೆ ಬಾಡಿಗೆದಾರರು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಉಪ ಬಾಡಿಗೆ ನೀಡಿ ಸರಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ಸುಮಾರು ವರ್ಷಗಳಿಂದ ಉಪ ಬಾಡಿಗೆ ಪಡೆದುಕೊಂಡು ಗ್ರಾಪಂ ನಷ್ಟ ಮಾಡುತಿದ್ದಾರೆ. ಕೆಲ ಅಂಗಡಿ ಮಳಿಗೆ ಮಾಲೀಕರಿಗೆ ಬಾಡಿಗೆ ಕಟ್ಟುವಂತೆ ಹಲವು ಬಾರಿ ಗ್ರಾಪಂನಿAದ ನೋಟಿಸ್ ನೀಡಿದ್ದರೂ ಕಿಮ್ಮತ್ತು ನೀಡದೆ ತಮ್ಮಷ್ಟಕ್ಕೆ ತಾವು ವ್ಯಾಪಾರ ಮುಂದುವರೆಸಿದ್ದರು. ಪೊಲೀಸ್ ಇಲಾಖೆ ಸಹಕಾರದೊಂದಿಗೆ ನೋಟಿಸ್ ನೀಡಿ 15 ದಿನಗಳವರೆಗೆ ಕಾಲಾವಕಾಶ ನೀಡಿದ್ದಾರೆ.

ಸರಕಾರದ ನಿಯಮಾನುಸಾರ ಕರಾರು ಅವಧಿಯಲ್ಲಿ ಹರಾಜು ಪ್ರಕ್ರಿಯೆ ನಡೆಸದೆ ನಿರ್ಲಕ್ಷಿö್ಯಸಿದ್ದು ಸುಮಾರು ವರ್ಷಗಳಿಂದ ಹಾಲಿ ಇರುವ ಅಂಗಡಿ ಬಾಡಿಗೆ ಪಡೆದವರು ಉಪ ಬಾಡಿಗೆ ನೀಡಿದ್ದಾರೆ. ಈ ಹಿಂದೆ ಮುಂಗಡ ಹಣ ಸ್ವೀಕರಿಸಿ ಸದರಿ ಹಣವನ್ನು ನಿಯಮಗಳಿಗೆ ವಿರುದ್ಧವಾಗಿ ಕರ್ಚು ಮಾಡಿದ್ದು ಅಂತಿಮ್ಮ ಬಿಡ್ಡುದಾರರ ಬೇಡಿಕೆ ಬಂದಲ್ಲಿ ಹಣ ಹಿಂಪಾವತಿಸಲು ಗ್ರಾಪಂ ಖಜಾನೆಯನ್ನು ಹಣವಿಲ್ಲದಂತೆ ಖಾಲಿ ಮಾಲಾಗಿದೆ. ಈ ಸಂದರ್ಭದಲ್ಲಿ ಪಿಎಸೈ ಶ್ರೀನಿವಾಸ್ ಪ್ರಸಾದ್, ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ್ ಗ್ರಾಪಂ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

ಗ್ರಾಪಂ ವ್ಯಾಪ್ತಿಯ ಅಂಗಡಿ ಮಳಿಗೆಗಳ ಬಾಡಿಗೆ ಸುಮಾರು ವರ್ಷಗಳಿಂದ ಬಾಕಿ ಇದ್ದು 42 ಮಳಿಗೆಗಳ 37 ಲಕ್ಷ ಬಾಡಿಗೆ ಬಾಕಿ ಇದೆ. ಮಳಿಗೆಗಳ ಅಗ್ರಿಮೆಂಟ್ ಅವಧಿಯು ಮುಗಿದಿದ್ದು ಎಲ್ಲಾ ಮಳಿಗೆಗಳಿಗೆ ನೋಟಿಸ್ ನೀಡಿದ್ದೇವೆ. ಸರಕಾರ ಸುತ್ತೋಲೆಯಂತೆ ಕ್ರಮ ವಹಿಸಲಾಗಿದೆ. ಸರಕಾರದ ಅದೇಶದಂತೆ ಮರು ಹರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಿಗೇನಹಳ್ಳಿ ಗ್ರಾಪಂ ಪಿಡಿಒ ಸುನಿಲ್ ಕುಮಾರ್ ತಿಳಿಸಿದ್ದಾರೆ.

You may have missed