web stats

Madhugirinews

#1NewsofMadhugiri

ಸಾರ್ವಜನಿಕ ರುಧ್ರಭೂಮಿ ಅಭಿವೃದ್ಧಿಗೆ ಗ್ರಾಪಂ ಮೀನಾಮೇಷ

ಕೊರಟಗೆರೆ: ಸಾರ್ವಜನಿಕ ಮತ್ತು ಪ.ಜಾತಿ, ಪ.ಪಂಗಡ ಸ್ಮಶಾನಕ್ಕೆ ಸರ್ಕಾರ ಭೂಮಿ ಮಂಜೂರು ಮಾಡಿದ್ದರು, ಅಧಿಕಾರಿಗಳ ನಿರ್ಲಕ್ಷö್ಯದಿಂದಸ್ಮಶಾನಅಭಿವೃದ್ಧಿಯಾಗದೆ ಅಂತ್ಯ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾ.ಪಂ ವ್ಯಾಪ್ತಿಯ ಸರ್ವೇ.ನಂ.43ರಲ್ಲಿಪ.ಜಾತಿ ಮತ್ತು ಪ.ಪಂಗಡ ಸ್ಮಶಾನಕ್ಕೆ10 ಗುಂಟೆ, ಸಾರ್ವಜನಿಕ ಸ್ಮಶಾನಕ್ಕೆ 10ಗುಂಟೆ ಜಮೀನು 2018ರಲ್ಲಿ ಮಂಜೂರು ಮಾಡಿದೆ. 2023-24ರಲ್ಲಿಗ್ರಾ.ಪಂಚಾಯ್ತಿಗೆ ಕಂದಾಯ ಇಲಾಖೆಯಿಂದಹಸ್ತಾAತರವಾಗಿದೆ. ಆದರೂ ಈವರೆಗೂಗ್ರಾ.ಪಂ ಅಧಿಕಾರಿಗಳು ಸಾರ್ವಜನಿಕಸ್ಮಶಾನವನ್ನು ಅಭಿವೃದ್ಧಿ ಮೀನಾಮೇಷ ಎಣಿಸುತ್ತಿದ್ದಾರೆ.

ಈಬಗ್ಗೆಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರೂ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲು ಗ್ರಾ.ಪಂ ಅಧಿಕಾರಿಗಳು ನಿರ್ಲಕ್ಷö್ಯವಹಿಸಿದ್ದಾರೆ ಎಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೃತದೇಹವಿಟ್ಟು ಪ್ರತಿಭಟನೆ:ಬೈಚಾಪುರ ಗ್ರಾಮದಲ್ಲಿ ಕಳೆದ 2018ರಲ್ಲಿ ದಲಿತ ಕುಟುಂಬವೊAದರಲ್ಲಿ ಸಾವಿನ ಘಟನೆ ನಡೆದಾಗ ಅಂತ್ಯಸAಸ್ಕಾರಕ್ಕೆ ಜಾಗವಿಲ್ಲದ ಕಾರಣ ಮೃತದೇಹವನ್ನು ಗ್ರಾ.ಪಂ ಎದುರು ಇಟ್ಟು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಜಿಲ್ಲಾಧಿಕಾರಿಗಳ ಸೂಚನೆಯಂತೆತನ್ನ ಕುಟುಂಬದ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನ ಕೊರತೆಯಿಂದಕAದಾಯ ಇಲಾಖೆ ಅರಣ್ಯ ಇಲಾಖೆ ನರ್ಸರಿ ಪ್ರದೇಶದಲ್ಲಿನ20ಗುಂಟೆ ಜಮೀನು ಸ್ಮಶಾನಕ್ಕೆಂದು ಮೀಸಲಿಟ್ಟು ಮಂಜೂರು ಮಾಡಿದ್ದರು, ಆದರೆ 7 ವರ್ಷ ಕಳೆದರೂ ಸ್ಮಶಾನ ಇದುವರೆಗೂ ಅಭಿವೃದ್ಧಿಯಾಗಿಲ್ಲ.

ಅಧಿಕಾರಿಗಳ ಉಡಾಫೆ ಉತ್ತರ:
2011ರ ಜನಗಣತಿ ಆಧಾರದ ಮೇಲೆ,ಭೂ ಕಂದಾಯ ಕಾಯ್ದೆ 1964ರ ಕಲಂ 71ರ ಅಡಿಯಲ್ಲಿ ಜಿಲ್ಲಾಡಳಿತಬೈಚಾಪುರ ಗ್ರಾಮದಸರ್ಕಾರಿ ತೋಪು ಸರ್ವೇ.ನಂ.43ರಲ್ಲಿ ಜಮೀನನ್ನುಎಸ್ಸಿ/ಎಸ್ಟಿ ಸ್ಮಶಾನ 10ಗುಂಟೆ, ಸಾರ್ವಜನಿಕ ಸ್ಮಶಾನ 10ಗುಂಟೆಜಮೀನು ಮಂಜೂರು ಮಾಡಿದೆ. ಆದರೆ ಗ್ರಾ.ಪಂ ಅಧಿಕಾರಿಗಳು ಸದರಿ ಜಾಗವನ್ನು ಹಸ್ತಾಂತರ ಮಾಡಿಕೊಂಡು ಸಾರ್ವಜನಿಕರ ಬಳಕೆಗೆ ನೀಡಲು ನಿರ್ಲಕ್ಷö್ಯವಹಿಸಿದ್ದು, ಈ ಬಗ್ಗೆ ಗ್ರಾ.ಪಂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ನಮಗೆ ಹಸ್ತಾಂತರವಾಗಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಿದ್ದು ಇವರ ಕಾರ್ಯವೈಖರಿಗೆ ತಿಳಿದ ಕೈಗನ್ನಡಿಯಾಗಿದೆ.

ಗ್ರಾಮದ ಸ್ಮಶಾನದ ಬಗ್ಗೆ ತಹಶೀಲ್ದಾರ್ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ ಸ್ಥಳ ಪರಿಶೀಲಿಸಿ ಮಾಹಿತಿ ನೀಡುತ್ತೇನೆ ಎಂದು ಹೇಳುತ್ತಿದ್ದು ಇದು ಕಂದಾಯ ಇಲಾಖೆಯ ನಿರ್ಲಕ್ಷö್ಯವೋ ಗ್ರಾ.ಪಂ ಆಡಳಿತ ವೈಫಲ್ಯವೋ ಎಂಬ ಅನುಮಾನ ಸಾರ್ವನಿಕರಲ್ಲಿ ಕಾಡುತ್ತಿದ್ದು ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಅಲ್ಲದೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ನಿರ್ಲಕ್ಷö್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

You may have missed