
ತುಮಕೂರು: ಕಾವರಗಲ್ ಅರಣ್ಯದ ಕ್ರಷರ್ ಬಂಡೆಯ ಇಳಿಜಾರಿನಲ್ಲಿ ಕಾರ್ಮಿಕರು ಡ್ರಿಲ್ಲಿಂಗ್ ಮಾಡುವ ವೇಳೆ ಮೇಲಿಂಗ್ ಬಂಡೆ ಕುಸಿದು ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಗಂಭೀರ ಗಾಯಗಳಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಮದ ಸರ್ವೆ ನಂ 35 ರಲ್ಲಿ ಚಂದ್ರಶೇಖರಬಾಬು ಎಂಬಾತನಿಗೆ ಸೇರಿದ ಕಲ್ಲುಕ್ವಾರೆಯಲ್ಲಿ ಅವಗಢ ನಡೆದಿದೆ. ಮಧ್ಯಪ್ರದೇಶ ಮೂಲದ ಕಾರ್ಮಿಕ ದಾಲ್ಮನ್(26) ಮೃತದುರ್ದೈವಿ. ಅಶೋಕ(32) ಮತ್ತು ಸೌದರಸಿಂಗ್(34)ಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ, ಸಿಪಿಐ ಅನಿಲ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು