
ಮಧುಗಿರಿ: ಅನೈತಿಕ ಸಂಬAಧಕ್ಕೆ ಅಡ್ಡಿಯಾಗಿದ್ದ ಪತಿಯಯನ್ನೇ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ ಆರೋಪದಡಿ ಇಬ್ಬರಿಗೆ 3ನೇ ಅಧಿಕ ಮತ್ತು ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯ ತಲಾ 50 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪುರವರ ಹೋಬಳಿಯ ಭಟ್ಟಗೆರೆ ಗ್ರಾಮದ ಆಂಜಿನಪ್ಪ ಎಂಬಾತನ ಪತ್ನಿ ಯಶೋಧ (32) ಮತ್ತು ಮಂಜುನಾಥ (28) ಇಬ್ಬರ ನಡುವೆ ಅನೈತಿಕ ಸಂಬAಧವಿದ್ದು ಇದನ್ನು ಪತಿ ಪ್ರಶ್ನಿಸಿ ಹಲ್ಲೇ ಮಾಡಿದಕ್ಕೆ ಯಶೋಧ ತನ್ನ ಪ್ರಿಯಕರ ಮಂಜುನಾಥ್ ಜತೆ ಸೇರಿಕೊಂಡು ಮೇ 12 2018 ರಂದು ಮಧ್ಯರಾತ್ರಿ 1-00 ಗಂಟೆ ಸಮಯದಲ್ಲಿ ಆಂಜಿನಪ್ಪನನ್ನು ಕೊಲೆ ಮಾಡಿದ್ದರು.
ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ಮೊನಂ 60/2018 ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ಮಧುಗಿರಿ ಡಿವೈ.ಎಸ್.ಪಿ ಕಲ್ಲೇಶಪ್ಪ.ಓ.ಬಿ ತನಿಖೆ ಕೈಗೊಂಡು 3ನೇ ಅಧಿಕ ಮತ್ತು ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ಜ್ಯೋತಿ ವಾದ ಮಂಡಿಸಿದ್ದು ಸದರಿ ಪ್ರಕರಣದಲ್ಲಿ ಆರೋಪ ಸಾಬಿತು ಆದ ಕಾರಣ ನ್ಯಾಯಾಲಯವು ಜೂ 30 ರಂದು ಪ್ರಕರಣದಲ್ಲಿ ಆರೋಪಿತರಾದ ಯಶೋಧ ಮತ್ತು ಮಂಜುನಾಥಗೆ ತಲಾ 50,000 ಸಾವಿರ ದಂಡ ಮತ್ತು ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು