
ಮಧುಗಿರಿ: ಒಂದು ವರ್ಷದಲ್ಲಿ ಮಧುಗಿರಿ ಪಟ್ಟಣದ ಅಭಿವೃದ್ಧಿಯನ್ನು ರಾಜ್ಯಕ್ಕೆ ಮಾಧರಿಯನ್ನಾಗಿ ಮಾಡಲಾಗುವುದು ಇದಕ್ಕೆ ಅಧಿಕಾರಿಗಳು ಹಾಗೂ ಸ್ಥಳಿಯ ಜನಪ್ರತಿನಿಧಿಗಳ ಸಹಕಾರ ಅಗತ್ಯ ವಿ.ಪ ಸದಸ್ಯ ಆರ್ ರಾಜೇಂದ್ರ ತಿಳಿಸಿದರು.
ಪಟ್ಟಣ ಡ್ಯೋಂ ಲೈಟ್ ವೃತ್ತದಲ್ಲಿ ಅಮೃತ್ 2.0 ಯೋಜನೆಯಡಿ ಸುಮಾರು 40 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಮಧುಗಿರಿ ಪಟ್ಟಣದ ಅಭಿವೃದ್ಧಿ ರಾಜ್ಯಕ್ಕೆ ಮಾಧರಿ ಕ್ಷೇತ್ರವನ್ನಾಗಿ ಮಾಡಲು ಸಚಿವರು ಈಗಾಗಲೇ ಪಣತೊಟ್ಟು ಅನುದಾನ ತರುತಿದ್ದಾರೆ. ಅಮೃತ್ ಯೋಜನೆಯಿಂದ ಕಾಮಗಾರಿಗಳು ವಿಳಂಬವಾಗಿದ್ದವು ಈ ಯೋಜನೆಯ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ಹಂತ ಹಂತವಾಗಿ ಸಿಸಿ ರಸ್ತೆ ಮತ್ತು ಡಾಂಬರ್ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಸಾರ್ವಜನಿಕರಿಗೆ ತೊಂದರೆ ಆಗದಂತೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು. ಸಿದ್ಧಾಪುರ ಕೆರೆಯಿಂದ ಪಟ್ಟಣಕ್ಕೆ ನೀರು ತರಲು ಇನ್ನು 20 ಕೋಟಿ ಅನುದಾನದ ಬೇಡಿಕೆ ಇದ್ದು ಈ ಬಗ್ಗೆ ಸಚಿವರ ಗಮನಕ್ಕೆ ತಂದು ಸರಕಾರದಿಂದ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತೇನೆ. ರಾಜೀವ್ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿಎ 10 ಕೋಟಿ, ಕೇಂಧ್ರದಿAದ ಖೇಲೋ ಇಂಡಿಯಾ ಯೋಜನೆಯಡಿ ಇಂಡೋರ್ ಸ್ಟೇಡಿಯಂ 6 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಸಹಕಾರ ನೀಡಿದ್ದಾರೆ.
2013 ರಲ್ಲಿ ರಾಜಣ್ಣನವರು ಶಾಸಕರಾಗಿದ್ದಾಗ ಯುಜಿಡಿ ಕಾಮಗಾರಿಯನ್ನು ಆರಂಭಿಸಿದ್ದರು ನಂತರ ಬಂದ ಶಾಸಕರು ಅದರ ಕಡೆ ಗಮನಕೊಡದ ಕಾರಣ ಇದುವರೆಗೂ ಯುಜಿಡಿ ಪೂರ್ಣಗೊಂಡಿಲ್ಲ. ಇದೀಗಾ ಮತ್ತೆ ರಾಜಣ್ಣನವರೇ ಇದರ ಬಗ್ಗೆ ಕಾಳಾಜಿವಹಿಸಿದ್ದು ಒಂದೆರಡು ಕಡೆ ರೈತರು ಜಮೀನು ನೀಡದ ಕಾರಣ ಕಾಮಗಾರಿ ವಿಳಂಬ ಆಗಿದೆ. ಈ ಕಾಮಗಾರಿ ಪೂರ್ಣಗೊಳ್ಳುವರೆಗೂ ಪ್ರತಿ ತಿಂಗಳು ಕಾಮಗಾರಿಯ ಸ್ಥಿತಿಗತಿ ಪರಿಶೀಲಿಸುತ್ತೇನೆ.
ಸಹಕಾರಿ ಸಚಿವರಾದ ಕೆ.ಎನ್ ರಾಜಣ್ಣ ಹಾಗೂ ವಿ.ಪ ಸದಸ್ಯ ಅರ್ ರಾಜೇಂಧ್ರ ಅವರ ದೂರದೃಷ್ಟಿಯ ಫಲವಾಗಿ ಮಧುಗಿರಿ ಪಟ್ಟಣದ ಅಭಿವೃದ್ಧಿಗೆ ಈಗಾಗಲೇ 80 ಕೋಟಿ ಅನುದಾನ ಬಿಡುಗಡೆಯಾಗಿದ್ದು ಅಲ್ಪ ಸಂಖ್ಯಾತರ ಇಲಾಖೆ 5 ಕೋಟಿ ಹಾಗೂ ಪುರಸಭೆ ಅನುದಾನವಿದ್ದು ಯುಜಿಡಿ ಪೂರ್ಣಗೊಂಡ ತಕ್ಷಣೆ ಪಟ್ಟಣದ ಚಿತ್ರಣ ಬದಲಾವಣೆಯಾಗಲಿದೆ ಎಂದರು. 1ನೇ ಬ್ಲಾಕಿನಲ್ಲಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಿದರೆ ಅಲ್ಪಸಂಖ್ಯಾತರ ಅನುದಾನದ ಕಾಮಗಾರಿಗಳು ಆರಂಭಗೊಳಿಸಬೇಕು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಉಪಾಧ್ಯಕ್ಷ ಸುಜಾತ್ ಶಂಕರ್ ನಾರಯಣ್, ಉಪ ವಿಭಾಗಧಿಕಾರಿ ಗೋಟೂರು ಶಿವಪ್ಪ, ಪುರಸಭೆ ಸದಸ್ಯರಾದ ಅಲೀಂ, ಮಂಜುನಾಥ್ ಆಚಾರ್, ಸಾಧಿಕ್, ಮಾಜಿ ಸದಸ್ಯ ಎನ್ ಗಂಗಣ್ಣ, ಮುಖಂಡರಾದ ಬಾಬ ಫಕೃದ್ದೀನ್, ಆನಂದ್ ಕೃಷ್ಣ ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು