
ಮಧುಗಿರಿ: ಭವಿಷ್ಯದಲ್ಲಿ ಮಕ್ಕಳಿಗೆ ಶಿಕ್ಷಣದ ಮೂಲಕ ಸದೃಡರನ್ನಾಗಿ ಮಾಡಿ ಯುಪಿಎಸ್ಸಿ, ಕೆಪಿಎಸ್ಸಿ ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜಿಸುವುದು ನಮ್ಮ ಮುಖ್ಯ ಧ್ಯೇಯವಾಗಬೇಕು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ಪಟ್ಟಣದ ಸಿದ್ದಾಪುರ ಶ್ರೀ ಕುಡೂತಿ ವೇಣುಗೋಪಾಲ ಸ್ವಾಮಿ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭವಿಷ್ಯದಲ್ಲಿ ತಮ್ಮ ಮಕ್ಕಳಿಗೆ ಸದೃಡರಾಗುವಂತೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ, ಆದ್ದರಿಂದ ತಾವುಗಳು ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸಿ, ಉನ್ನತ ಮಟ್ಟದ ಅಧಿಕಾರಿಗಳು & ಸ್ವಯಂ ಉದ್ಯೋಗಸ್ಥರನ್ನಾಗಿ ಮಾಡುವುದು ಪೋಷಕರಾದ ನಮ್ಮಗಳ ಆದ್ಯ ಕರ್ತವ್ಯವಾಗಬೇಕಿದೆ. ಶೈಕ್ಷಣಿಕ, ಸಾಮಾಜಿಕ, ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ಹನುಮಂತನಾಥ ಮಹಾಸ್ವಾಮೀಜಿ ಮಾತನಾಡಿ ಹಣ ಮಾಡಿ ಮಕ್ಕಳಿಗೆ ಆಸ್ತಿ ಮಾಡಿದರೆ ಜೀವನ ಸಾರ್ಥಕವಾಗುವುದಿಲ್ಲ, ಇಂತಹ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದರು.ಸಮುದಾಯದ ಮುಂದಿನ ಬರುವಂತಹ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಮುದಾಯ ಸಂಘಟನೆ ಆಗಬೇಕು. ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ನಮ್ಮೇಲ್ಲರ ಆಸೆ ರಾಜಕೀಯವಾಗಿ ಮುರಳೀಧರ ಹಾಲಪ್ಪ ರವರಿಗೆ ಪ್ರಬಲವಾಗಿ ತಾವುಗಳೆಲ್ಲಾ ಶಕ್ತಿ ತುಂಬಬೇಕು, ಭವಿಷ್ಯದ ದಿನಗಳಲ್ಲಿ ಮುರಳೀಧರ ಹಾಲಪ್ಪ ನವರಿಗೆ ಸೂಕ್ತ ಸ್ಥಾನ ಸಿಗುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಆಯುಕ್ತರಾದ ಡಾ..ಗೋಪಾಲಕೃಷ್ಣ, ಕುಡೂತಿ ವೇಣುಗೋಪಾಲ ಸ್ವಾಮಿ ಸಮಿತಿ ಅಧ್ಯಕ್ಷ ರಂಗನಾಥ್, ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯ ವೈದ್ಯ ಡಾ..ಎನ್,ಹೆಚ್, ಹಾಲಪ್ಪ ಮುಖಂಡರಾದ ಸುರೇಶ್, ಕೃಷ್ಣಮೂರ್ತಿ, ಬಾಬು, ಗೋಪಾಲ್, ರಾಮಕೃಷ್ಣೇಗೌಡ ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು