
ತಾಲೂಕು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಗರಂ
ಮಧುಗಿರಿ: ಎಲ್ಲ ಇಲಾಖೆಯ ಕಚೇರಿಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲು ಸಮಗ್ರ ಮಾಹಿತಿ ಒಳಗೊಂಡ ನಾಮಫಲಕ ಹಾಕಬೇಕಿದ್ದು ಶೇ.90 ರಷ್ಟು ಇಲಾಖೆಗಳು ಹಾಕಿಲ್ಲ ಸಾರ್ವಜನಿಕರಿಂದ ಬಂದAತಹ ಅರ್ಜಿಗಳನ್ನು ಅಂದೇ ವಿಲೇವಾರಿ ಮಾಡಿದರೆ ಅರ್ಧ ಕೆಲಸ ಮುಗಿಯುತ್ತದೆ ಎಂದು ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ್ ಅನಮಧಾನ ವ್ಯಕ್ತಪಡಿಸಿದರು
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ಲೋಕಾಯುಕ್ತ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು ಯಾವ ಕಚೇರಿಯಲ್ಲಿ ಲೋಕಾಯುಕ್ತದ ನಾಮಫಲಕ ಇರುವುದಿಲ್ಲವೋ ಮುಂದಿನ ದಿನಗಳಲ್ಲಿ ಅಚ್ಚರಿಯ ಭೇಟಿ ನೀಡಿ ಸ್ಥಳದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭೆಯಲ್ಲಿ ಬೇ ಖಾಕಿ ಉಳಿಸಿಕೊಂಡ ವ್ಯಕ್ತಿಗೆ ಮತ್ತೆ ಮಳೆಗೆ ಒದಗಿಸಿಕೊಟ್ಟು ಟೆಂಡರ್‌ನಲ್ಲಿ ಹೆಚ್ಚು ಬೆಲೆಗೆ ಹರಾಜು ಕೂಗಿದವರಿಗೆ ಅನ್ಯಾಯ ಮಾಡಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು ದಾಖಲೆ ಸಮೇತ ಮಾಹಿತಿ ಒದಗಿಸಲಾಗಿದೆ. ವಿಚಾರಣೆಯಲ್ಲಿ ಈ ಬಗ್ಗೆ ವರದಿ ನೀಡಲು ಜಿಲ್ಲಾ ಕಚೇರಿಗೆ ಬರುವಂತೆ ಪುರಸಭೆ ಮುಖ್ಯಾಧಿಕಾರಿ ಸಿಓ ಸುರೇಶ್‌ಗೆ ಸೂಚಿಸಿದರು.
ಪಿಡಿಓಗೆ ತಾಕೀತು:
5 ಸಾವಿರಕ್ಕೂ ಅಧಿಕ ಲೋಡ್ ಕೆರೆಯ ಮಣ್ಣನ್ನು ಬಳಸಲು ಎನ್‌ಜಿಓ ಸಂಸ್ಥೆಯೊAದಕ್ಕೆ ಅನಧಿಕೃತವಾಗಿ ಅನುಮತಿ ನೀಡಿ ರಾಜಧನ ನಗ್ನಗೊಳಿಸಿದ ಆರೋಪದ ದೂರು ಬಂದ ಹಿನ್ನೆಲೆಯಲ್ಲಿ ಸೂಕ್ತ ದಾಖಲಾತಿಯೊಂದಿಗೆ ಜಿಲ್ಲಾ ಕಚೇರಿಗೆ ಬರುವಂತೆ ತಾಕೀತು ಮಾಡಲಾಯಿತು.
ಜೇಬಲ್ಲಿದ್ದ ಹಣದ ಲೆಕ್ಕೆ ಬರೆದಿಡಿ
ಡಿವೈಎಸ್ಪಿ ವೆಂಕಟೇಶ್ ಮಾತನಾಡಿ ಪ್ರತಿ ಸರಕಾರಿ ಅಧಿಕಾರಿ, ನೌಕರ, ಅರೆಕಾಲಿಕ ನೌಕರ ಕೂಡ ಕಚೇರಿಯ ಒಳಗೆ ಹೋಗುವಾಗ ನಗದು ವಹಿ ಪುಸ್ತಕವನ್ನು ಬರೆಯಬೇಕು. ಜೇಬಲ್ಲಿದ್ದ ಹಣ ಎಷ್ಟು ಎಂದು ಹೋಗುವಾಗ ಎಷ್ಟಿತ್ತು ಎಂದು ಬರೆದಿಡಬೇಕು. ಹಾಗೂ ಒಳಗೆ ಮತ್ತು ಹೊರಗೆ ಬಂದು ಹೋಗುವಾಗ ಮೂವ್‌ಮೆಂಟ್ ರಿಜಿಸ್ಟರ್ ಪಾಲಿಸಬೇಕು. ಈ ಬಗ್ಗೆ ಎಲ್ಲೂ ಸಹಿ ಹಾಕಿದ ನಿದರ್ಶನವಿಲ್ಲ. ಕಚೇರಿಗೆ ಬಂದ ಅರ್ಜಿಗಳ ಜವಾಲು ಸ್ವೀಕಾರ ಪುಸ್ತಕವನ್ನು ಸಮರ್ಥವಾಗಿ ನಿಭಾಯಿಸಿರಬೇಕು. ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕೆಲಸ ಮಾಡುವವರು ಗುರುತಿನ ಚೀಟಿ ಹಾಕಿಕೊಂಡಿರಲ್ಲ. ನಿಮ್ಮ ಟೇಬಲ್ ಮುಂದೆ ನಿಮ್ಮ ಹೆಸರು ಹಾಗೂ ಸ್ಥಾನದ ಬಗ್ಗೆಯೂ ಮಾಹಿತಿಯಿಲ್ಲ ಅಸಮಧಾನ ವ್ಯಕ್ತಪಡಿಸಿದರು.
ತಾಪಂ ಇಒ ವಿರುದ್ಧ ಲೋಕಾ ಗರಂ
ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಹಾಗೂ ಅಧಿಕಾರದ ದರ್ಪ ಎದ್ದು ಕಾಣುತ್ತಿದ್ದು ಜನಸೇವೆಯ ಮನೋಭಾವ ಕಾಣುತ್ತಿಲ್ಲ, ಇಂದಿನ ಕುಂದುಕೊರತೆ ಸಭೆಯ ಬಗ್ಗೆ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಸಭೆಗೆ ಕನಿಷ್ಟ 10 ದೂರುಗಳು ಬಂದಿಲ್ಲ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲವೇ ಎಂದು ತಾ.ಪಂ.ಇಓ ರವರನ್ನು ಪ್ರಶ್ನಿಸಿದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು