
ತುಮಕೂರು: ಎರಡು ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಭಾನುವಾರ ರಾತ್ರಿ ಜರುಗಿದೆ.
ಮಧುಗಿರಿ ಹೊರವಲಯದ ತುಮಕೂರು ರಸ್ತೆಯ ಕೆಶಿಪ್ ರಾಜ್ಯ ಹೆದ್ದಾರಿಯಲ್ಲಿರುವ ಕಾಟಗಾನಹಟ್ಟಿ (ಕೆರೆಗಳ ಪಾಳ್ಯ) ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪಾವಗಡ ಮೂಲದ ಎತ್ತಿನಹಳ್ಳಿ ಗ್ರಾಮದ ಜನಾರ್ಧನ್ ರೆಡ್ಡಿ ಕುಟುಂಬಸ್ಥರು ಗೌರಿ ಹಬ್ಬ ಮುಗಿಸಿ ಬೆಂಗಳೂರಿಗೆ ತೆರಳುತಿದ್ದರು ಮತ್ತೊಂದು ಕುಟುಂಬ ಕೊರಟಗೆರೆಯಿಂದ ಮಧುಗಿರಿಗೆ ಬರುತ್ತಿದ್ದರು ಎನ್ನಲಾಗಿದೆ.

ಪಾವಗಡ ಮೂಲದ ಎತ್ತಿನಹಳ್ಳಿ ಗ್ರಾಮದಲ್ಲಿ ಗೌರಿ ಹಬ್ಬ ಮುಗಿಸಿ ಬೆಂಗಳೂರಿಗೆ ತೆರಳುತಿದ್ದ ಕಾರಿನಲ್ಲಿ ಜರ್ನಾಧನ್ ರಡ್ಡಿ (50) ಮಗಳು ಸಿಂಧುಜಾ (35) ವೇದಾಸ್ ರೆಡ್ಡಿ (8) ಹಾಗೂ ಮಧುಗಿರಿ ಮೂಲದ ಮಿಡಿಗೇಶಿ ಹೋಬಳಿ ಕಾರೇನಹಳ್ಳಿ ಗ್ರಾಮದ ಸಿದ್ದಗಂಗಪ್ಪ ಹಾಗೂ ನಾಗರಾಜು (30) ಒಟ್ಟು ಒಟ್ಟು ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದು ಮೃತ ದೇಹಗಳನ್ನು ಮಧುಗಿರಿ ಶವಗಾರದಲ್ಲಿ ಇರಿಸಲಾಗಿದೆ.
ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಗೀತಾ (38) ಹಾಗೂ ಪುತ್ರ ಯೋಧಕಿರಣ್ (14) ಮತ್ತೊಂದು ಕಾರಿನ ಚಾಲಕ ಆನಂದ್ ಹಾಗೂ ಸಿಂಧುಜಾ ಪುತ್ರ ಟ್ರಯಾಗ್ ದಾಸ್ ರೆಡ್ಡಿ (14 ತಿಂಗಳು) ಗಂಡು ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿದ್ದಾರೆ. ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಾದ ಗಾಯಾಳನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು