web stats

Madhugirinews

#1NewsofMadhugiri

CRIME- ಬೇಕರಿ ಮಾಲಿಕ ಆತ್ಮಹತ್ಯೆ

ತುಮಕೂರು: ಬೇಕರಿ ಮಾಲೀಕ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿರುವ ಹೇರೂರು ಬಳಿಯಿರುವ ಸಿಇಟಿ ಕಾಲೇಜು ಬಳಿ ರಾಜು (45) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಕುಟುಂಬದ ಜೊತೆ ಹೇರೂರು ಗ್ರಾಮದಲ್ಲಿ ವಾಸವಿದ್ದ ರಾಜು ಹಲವು ವರ್ಷಗಳಿಂದ ಸಿಇಟಿ ಕಾಲೇಜು ಮುಂಭಾಗ ಬೇಕರಿ ನಡೆಸುತ್ತಿದ್ದ ರಾತ್ರಿ ಬೇಕರಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೇಲ್ನೋಟಕ್ಕೆ ಹಣಕಾಸು ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದ್ದು ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

You may have missed