
ಮಧುಗಿರಿ: ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ನೆಲಸಿರುವ ಸೂಫಿ ಹಜರತ್ ಬಾಬಾ ರಿಯಾಜುದ್ದೀನ್ ಶಾ ಖಲೀಫೇ ರಫಾಯಿ ಅವರ 4ನೇ ಉರುಸ್ ಮುಬಾರಕ್ ಕಾರ್ಯಕ್ರಮವನ್ನು ಮೇ 1 ರಂದು ಬುಧವಾರ ಹಮ್ಮಿಕೊಳ್ಳಲಾಗಿದೆ ಎಂದು ಕಮಿಟಿ ಮುಖ್ಯಸ್ಥರಾದ ಖ್ವಾಜಾ ರಫಾಯಿ ತಿಳಿಸಿದ್ದಾರೆ.
ಉರುಸ್ ಕಾರ್ಯಕ್ರಮದ ಅಂಗವಾಗಿ ಫುಕ್ರಾ ತಂಡವು ಜುಲೂಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂಜೆ 6: 30ಕ್ಕೆ ಗಂಧದ ಉತ್ಸವ ನಡೆಯಲಿದೆ. ರಾತ್ರಿ 10 ಗಂಟೆ ಗೆ ಖವ್ವಾಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು