
ಮಧುಗಿರಿ: ದ್ವಿಚಕ್ರ ವಾಹನ ಹಾಗೂ ಟೆಂಪೋ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿಯ ಸವಾರನಿಗೆ ಸಣ್ಣ ಪುಟ್ಟ ಘಾಯಗಳಾಗಿರುವ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಕಸಬ ವ್ಯಾಪ್ತಿಯ ತುಮಕೂರು – ಮಧುಗಿರಿಯ ಕೆ ಶಿಫ್ ರಸ್ತೆಯಲ್ಲಿನ ತುಮಕೂರು ಮಾರ್ಗವಾಗಿ ಬರುತ್ತಿದ್ದ ಟೆಂಪೋ ಏಕಾಏಕಿ ಮಧುಗಿರಿ ಮಾರ್ಗವಾಗಿ ಹೋಗುತ್ತಿದ್ದ ದ್ವಿ ಚಕ್ರ ವಾಹನದ ಮೇಲೆ ಹರಿದಿದೆ.
ಮಧುಗಿರಿಯ ಗಡಿಭಾಗದಲ್ಲಿನ ಬಣವೇನಹಳ್ಳಿಯ ಸಮೀಪ ಅಪಘಾತ ಸಂಭಂವಿಸಿದ್ದು ದೊಡ್ಡಬಳ್ಳಾಪುರ ಮೂಲದ ಹಾಲಪ್ಪನಹಳ್ಳಿ ವಾಸಿ ಮುನಿರಾಜು(26) ವಾಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಧುಗಿರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಇಂದ ಮಧುಗಿರಿ ಪಟ್ಟಣಕ್ಕೆ ಸೀಮಂತ ಕಾರ್ಯಕ್ರಮಕ್ಕೆ ಬರುತಿದ್ದ ವೇಳೆ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು