web stats

Madhugirinews

#1NewsofMadhugiri

ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲು ಅಡ್ಡಿ; ಗ್ರಾಮಸ್ಥರ ಆಕ್ರೋಶ

ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಿರಿಕಿರಿ

ಮಧುಗಿರಿ: ಗ್ರಾಮದ ಸರಕಾರಿ ಗೋಮಾಳದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಅಶ್ವತ್ಥಪ್ಪ ಕುಟುಂಬಸ್ಥರು ಅಡ್ಡಿಪಡಿಸುತಿದ್ದು ಸಂಬAಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಕಂತಾನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಐ.ಡಿ ಹಳ್ಳಿ ಹೋಬಳಿಯ ಕಂತನಹಳ್ಳಿ ಗ್ರಾಮದ ಸರ್ವೆ ನಂ 31 ರಲ್ಲಿ ಸರಕಾರಿ ಗೋಮಾಳ ಸುಮಾರು 33 ಎಕೆರೆ ಜಾಗವಿದ್ದು ಸದರಿ ಜಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಮುದಾಯ ಭವನ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಅಶ್ವತ್ಥಪ್ಪ ಕುಟುಂಬಸ್ಥರು ಒಂದೂವರೆ ಎಕರೆ ಜಾಗದಲ್ಲಿ ಬೆಳೆ ಇಟ್ಟುಕೊಂಡಿದ್ದು , ಗ್ರಾಮದಲ್ಲಿ  ಸರಕಾರದಿಂದ ನಿವೇಶನವನ್ನು ಪಡೆದುಕೊಂಡಿದ್ದಾರೆ, ಇದೀಗಾ ಸರ್ವೆ ನಂ 31ರಲ್ಲಿ ಒಂದು ಮನೆಯನ್ನು ನಿರ್ಮಿಸಿಕೊಂಡು ಇದೀಗಾ ಸಮುದಾಯ ಭವನ ನಿರ್ಮಾಣ ಮಾಡುವ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಗ್ರಾಮಸ್ಥರಿಗೆ ಸಮುದಾಯ ಭವನ ನಿರ್ಮಾಣ ಮಾಡದಂತೆ ಅಡ್ಡಿಪಡಿಸುತಿದ್ದಾರೆ.

ವಿಡಿಯೋ ನೋಡಲು👇

ಅ 20 ರಂದು ಸಮಾಜ ಇಲಾಖೆಯ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಸರಕಾರಿ ಗೋಮಾಳದ ಜಾಗಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮುದಾಯ ಭವನ ನಿರ್ಮಾಣ ಮಾಡಲು ಜಾಗವನ್ನು ಜಿಪಿಎಸ್ ಮಾಡಿ ಹೋಗಿದ್ದು ಇದನ್ನು ಕಂಡು ಮರು ದಿನವೇ ಅಶ್ವತ್ಥಪ್ಪ ಕುಟುಂಬಸ್ಥರು ಆಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡು ಸಮುದಾಯ ಭವನ ನಿರ್ಮಿಸಲು ಅಡ್ಡಿಪಡಿಸುತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ತಾಲ್ಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಸಿದ್ಧಯ್ಯ, ಕೆ.ಎನ್ ಕುಮಾರ್, ಶಿವರಾಜ್ ಕುಮಾರ್, ರಾಮಪ್ಪ ಹನುಮಂತರಾಯ, ಲಕ್ಷಿö್ಮನರಸಪ್ಪ, ರೋಜಾ, ಗಾಯತ್ರಿ, ಶಿಲ್ಪ, ಸುರ್ವಣಮ್ಮ, ಮಂಜುನಾಥ್, ಪ್ರಭಾಕರ್, ಪ್ರದೀಪ್ ಸುಭ್ರಮಣ್ಯ, ಚಿದಾನಂದ್ ಆರೋಪಿಸಿದ್ದಾರೆ.

ಕಂತಾನಹಳ್ಳಿ ಗ್ರಾಮದ ಸರ್ವೆ 31 ರಲ್ಲಿ 33 ಎಕರೆ ಗೋಮಾಳ ಜಾಗವಿದ್ದು ಸದರಿ ಜಾಗದಲ್ಲಿ ಸರಕಾರಿ ಶಾಲೆ ಹಾಗೂ ಕೆಲವೊಂದು ರೈತರು ಬೆಳೆ ಇಟ್ಟುಕೊಂಡಿದ್ದಾರೆ. ಉಳಿಕೆ ಜಾಗದಲ್ಲಿ ಸುಮಾರು 10 ಕ್ಕು ಹೆಚ್ಚು ಸೂರು ವಂಚಿತರು ಮನೆ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಅಶ್ದತ್ಥಪ್ಪ ಕುಟುಂಭಸ್ಥರು ಸಹ ಒಂದು ಮನೆಯನ್ನು ನಿರ್ಮಿಸಿಕೊಂಡು ಇದೀಗಾ ಮತ್ತೆ 3 ಸೈಟಿಗಳು ಜಾಗವನ್ನು ಆಕ್ರಮಿಸಿಕೊಂಡು ಇದೀಗಾ ಸಮುದಾಯ ಭವನದ ಜಾಗವನ್ನು ಬೇಕೆಂದು ಪಟ್ಟು ಅಡ್ಡಿಪಡಿಸುತಿದ್ದಾರೆ ಗ್ರಾಮಸ್ಥರ ಪ್ರಭಲ ಆರೋಪವಾಗಿದೆ. ಕಂತಾನಹಳ್ಳಿ ಗ್ರಾಮದ ಸಮಸ್ಯೆ ಬಗ್ಗೆ ತಹಶಿಲ್ದಾರ್ ಸಿಗ್ಬತ್ ಉಲ್ಲಾ ಹಾಗೂ ತಾಪಂ ಇಓ ಲಕ್ಷö್ಮಣ್ರವಿಗೆ ಸುಮಾರು ಗ್ರಾಮಸ್ಥರು ಮನವಿ ನೀಡಿದ್ದಾರೆ, ಈ ಬಗ್ಗೆ ಹಲವು ಕರೆ ಮಾಡಿದ್ದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.

ಸದರಿ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿ ಜಿಪಿಎಸ್ ಮಾಡುವ ಗುಡಿಸಲು ಇರಲಿಲ್ಲ ವಿನಾಃಕಾರಣ ಸಮುದಾಯ ಭವನ ನಿರ್ಮಾಣಕ್ಕೆ ಇಲ್ಲಿ ಅಡ್ಡಿಪಡಿಸುತಿದ್ದಾರೆ ಎಂದು ಐ.ಡಿ ಹಳ್ಳಿ ಗ್ರಾಪಂ ನ ಪಿಡಿಓ ಪ್ರಕಾಶ್ ತಿಳಿಸಿದ್ದಾರೆ.

ನಮ್ಮ ಗ್ರಾಮದಲ್ಲಿ ನಡೆಯುವ ಶುಭಕಾರ್ಯಗಳಿಗೆ ಯಾವುದೆ ಜಾಗವಿರಲಿಲ್ಲ, ಸಹಕಾರಿ ಸಚಿವ ಕೆ.ಎನ್ ರಾಜಣ್ಣನವರು ಸಮುದಾಯ ಭವನ ನಿರ್ಮಿಸಿಕೊಳ್ಳಲು ಅನುದಾನ ನೀಡಿದ್ದು ಇದೀಗಾ ಅಶ್ವತ್ಥಪ್ಪ ಕುಟುಂಬಸ್ಥರು ಸದರಿ ಸರಕಾರಿ ಜಾಗದ ಬಗ್ಗೆ ವಿನಾಃಕಾರಣ ಅಡ್ಡಿಪಡಿಸುತಿದ್ದಾರೆ. ಈಗಾಗಲೇ ಅಶ್ವತ್ಥಪ್ಪ ಎಂಬುವರು ಗೋಮಾಳದಲ್ಲಿ 1 ಎಕರೆ ಜಮೀನಿನಲ್ಲಿ ಬೆಳೆ ಇಟ್ಟಿದ್ದಾರೆ, ಇದಲ್ಲದೆ ಒಂದು ಮನೆಯನ್ನು ನಿರ್ಮಿಸಿಕೊಂಡು ಅದರ ಪಕ್ಕದಲ್ಲಿರುವ 3 ಸೈಟುಗಳುಳ್ಳ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ ಇದರ ಜತೆಯಲ್ಲಿ ಇದೀಗಾ ಸಮುದಾಯ ಭವನ ಜಿಪಿ ಮಾಡಿರುವ ಸರಕಾರಿ ಜಾಗವನ್ನು ಕಬಳಿಸುವ ಹುನ್ನಾರು ಮಾಡುತಿದ್ದಾರೆ ಅಲ್ಲದೆ ಅವರ ಬಳಿ ಯಾವುದೆ ದಾಖಲೆಗಳಿಲ್ಲ ದಾಖಲೆ ಇದ್ದರೆ ಅಧಿಕಾರಿಗಳ ಗಮನಕ್ಕೆ ತರಲಿ ಎಂದು ಗ್ರಾಮದ ಮುಖಂಡ ಮಂಜುನಾಥ್ ಕೆ.ಎಸ್ ಆರೋಪಿಸಿದ್ದಾರೆ.

ಈಗಾಗಲೇ ಗ್ರಾಮದ ಗೋಮಾಳದಲ್ಲಿ ಎಲ್ಲರೂ ಮನೆ ಕಟ್ಟಿಕೊಂಡಿದ್ದಾರೆ ನಮ್ಮನ್ನು ತೊಂದರೆ ಕೊಡುವ ಉದ್ದೇಶದಿಂದ ಇದೇ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಹೊರಟಿದ್ದಾರೆ. ನಾನಿರುವ ಮನೆ ಕಟ್ಟಿಕೊಂಡಿದ್ದೇನೆ ನನಗೆ 3 ಜನ ಮಕ್ಕಳು ನನ್ನ ದೊಡ್ಡ ಮಗ ಅವನ ಪತ್ನಿ ಜತೆ ಗುಡಿಸಲು ಹಾಕಿಕೊಂಡು ವಾಸವಿದ್ದೇನೆ ನಮಗೆ ಕಳೆದ 15 ದಿನಗಳಿಂ ಕಿರುಕುಳ ನೀಡುತಿದ್ದಾರೆ ನಮಗೆ ನ್ಯಾಯ ಬೇಕು ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ ಎಂದು ಅಶ್ವತ್ಥಪ್ಪ ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ.

You may have missed