
ತುರುವೇಕೆರೆ: ತಾಲೂಕಿನ ಕೆ.ಮಾವಿನಹಳ್ಳಿಯ ರೈತ ಕುಮಾರಾಚಾರ್ ರವರ ಸಾವು ಪೋಲಿಸರ ದೌರ್ಜನ್ಯದಿಂದ ಆಗಿರುವ ಹಿನ್ನೆಲೆಯಲ್ಲಿ ಆ ಪ್ರಕರಣವನ್ನು ಸಿಓಡಿಗೆ ಒಪ್ಪಿಸಬೇಕೆಂದು ಸಮಾಜ ಸೇವಕರೂ ಹಾಗೂ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಇತರೇ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷೆ ಡಾ.ಪವಿತ್ರ ಆರ್ ಪ್ರಭಾಕರ ರೆಡ್ಡಿಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಕುಮಾರಾಚಾರ್ ರವರು ಜೂಜಾಟದಲ್ಲಿ ತೊಡಗಿದ್ದರು ಎಂಬ ಆರೋಪ ಹೊರಿಸಿದ ಸ್ಥಳೀಯ ಪೋಲಿಸರು ಅವರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಅಲ್ಲದೇ ಅವರ ಮೇಲೆ ಹಲ್ಲೆ ಮಾಡಿರುವ ಕಾರಣ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ವಿಶ್ವಕರ್ಮ ಸಮಾಜಕ್ಕೆ ಸೇರಿದ ಕುಮಾರಾಚಾರ್ ರವರು ಕೃಷಿಕರಾಗಿದ್ದಾರೆ. ಅಲ್ಲದೇ ಕುಲಕಸುಬು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಪೋಲಿಸರ ದಬ್ಬಾಳಿಕೆಯಿಂದ ಹಾಗೂ ಹಲ್ಲೆ ಮಾಡಿರುವ ಕಾರಣಕ್ಕೆ ಕುಮಾರಾಚಾರ್ ಮೃತಹೊಂದಿದ್ದಾರೆ ಎಂದು ಡಾ.ಪವಿತ್ರಾ ಆರ್.ಪ್ರಭಾಕರ ರೆಡ್ಡಿಯವರು ಆರೋಪಿಸಿದ್ದಾರೆ.
ಪೋಲಿಸರ ದೌರ್ಜನ್ಯದಿಂದ ಸಾವಿಗೀಡಾಗಿರುವ ಕಾರಣ ಸಂಬAಧಿಸಿದ ಪೋಲಿಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತಿನಲ್ಲಿಡಬೇಕು. ಅಲ್ಲದೇ ಈ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಪರಿಹಾರ – ಪೋಲಿಸರ ದೌರ್ಜನ್ಯಕ್ಕೆ ಬಲಿಯಾಗಿರುವ ಕುಮಾರಾಚಾರ್ ರವರ ಕುಟುಂಬ ತಬ್ಬಲಿಯಾಗಿದೆ. ಹಾಗಾಗಿ ಸೂಕ್ತ ಪರಿಹಾರವನ್ನೂ ಸಹ ಸರ್ಕಾರ ನೀಡಬೇಕೆಂದು ಡಾ.ಪವಿತ್ರಾ ಆರ್.ಪ್ರಭಾಕರರೆಡ್ಡಿ ಆಗ್ರಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ತಾವು ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಸವಲತ್ತುಗಳನ್ನು ಕೊಡಿಸಲು ಪ್ರಾಮಣಿಕವಾಗಿ ಪ್ರಯತ್ನಿಸುವುದಾಗಿಯೂ ಸಹ ಡಾ.ಪವಿತ್ರ ಆರ್.ಪ್ರಭಾಕರ ರೆಡ್ಡಿಯವರು ತಿಳಿಸಿದ್ದಾರೆ. ಕುಮಾರಾಚಾರ್ ರವರ ಸಾವಿನ ಬಗ್ಗೆ ಅನುಮಾನವಿದೆ. ಪೋಲಿಸರೇ ಹೊಡೆದು ಅವರನ್ನು ಸಾಯಿಸಿದ್ದಾರೆ. ಆದರೆ ಪೋಲಿಸರು ಕುಮಾರಾಚಾರ್ ವಾಹನದಿಂದ ಬಿದ್ದ ಕಾರಣ ಮೃತಹೊಂದಿದ್ದಾರೆAದು ಹೇಳುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ವಾಹನ ಚಲಾವಣೆ ಮಾಡುವ ಸಂಧರ್ಭದಲ್ಲಿ ಪೋಲಿಸರೇ ಅವರನ್ನು ಕರೆತರುತ್ತಿದ್ದರು. ಆದರೆ ಪೋಲಿಸರಿಗೆ ಏಕೆ ಗಾಯವಾಗಿಲ್ಲ. ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಅಪಘಾತವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆಂದು ಡಾ.ಪವಿತ್ರಾ ಆರ್.ಪ್ರಭಾಕರ ರೆಡ್ಡಿ ಆರೋಪಿಸಿದ್ದಾರೆ.
ಈ ಕುರಿತು ತಾವು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರಿಗೂ ಪತ್ರ ಬರೆದು ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸಬೇಕೆಂದು ಮನವಿ ಮಾಡುವುದಾಗಿ ಡಾ.ಪವಿತ್ರಾ ಆರ್.ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು