
ತುಮಕೂರು: ತುಮಕೂರು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ವಿನೂತನ ನಡೆ. ಇದೀಗಾ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ನಡೆದ ಸಭೆಗೆ ತುಮಕೂರು ಜಿಲ್ಲಾ ಕೇಂದ್ರದಿAದ 70 ಕಿಲೋ ಮೀಟರ್ ದೂರವಿರುವ ಹುಲಿಯೂರುದುರ್ಗ ಗ್ರಾಮಕ್ಕೆ ತೆರಳಬೇಕಿತ್ತು. ಕುಣಿಗಲ್ ತಾಲ್ಲೂಕು ಮಟ್ಟ ಜನತಾ ದರ್ಶನ ಸಭೆಗೆ ಜಿಲ್ಲಾಧಿಕಾರಿ, ಜಿ.ಪಂ ಸಿಇಒ, ಡಿಎಫ್ಒ ಸೇರಿದಂತೆ 60 ಅಧಿಕಾರಿಗಳ ತಂಡ ಒಟ್ಟಾಗಿ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಪಯಣ ಮಾಡಿದ್ದಾರೆ. ಪ್ರತ್ಯೇಕವಾಗಿ ಕಾರಿನಲ್ಲಿ ಬರದೆ ಒಟ್ಟಾಗಿ ಬಸ್ ನಲ್ಲಿ ಬಂದ ಅಧಿಕಾರಿಗಳು. ಬರ ಪರಿಸ್ಥಿತಿ ಪರಿಣಾಮ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಜಿಲ್ಲಾಢಳಿ ವಿನೂತನ ಪ್ರಯತ್ನ ಕೈ ಹಾಕಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು