web stats

Madhugirinews

#1NewsofMadhugiri

ರೈತರಿಗೆ ಆಧುನಿಕ ಕುರಿ/ಮೇಕೆ ಸಾಕಾಣಿಕೆ ತರಬೇತಿ

ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ ಆಧುನಿಕ ಕುರಿ/ಮೇಕೆ ಸಾಕಾಣಿಕೆ ಕುರಿತು ಉಚಿತ ತರಬೇತಿ ನೀಡಲಾಗುವುದು ಎಂದು ಮುಖ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ. ತರಬೇತಿಯು ಆಸಕ್ತ 25ಮಂದಿ ರೈತರಿಗೆ ಮಾತ್ರ ನೀಡಲಾಗುವುದು. ಆಧುನಿಕ ಕುರಿ/ಮೇಕೆ ಸಾಕಾಣಿಕೆ ತರಬೇತಿಯನ್ನು ನವೆಂಬರ್ 3 ಮತ್ತು 4ರಂದು ಹಮ್ಮಿಕೊಳ್ಳಲಾಗಿದೆ. ನಿಗಧಿಪಡಿಸಿದ ದಿನಾಂಕದAದು ಬೆಳಿಗ್ಗೆ 10 ಗಂಟೆಗೆ ತರಬೇತಿಗೆ ಹಾಜರಾಗಬಹುದಾಗಿದೆ. ತರಬೇತಿಗೆ ಹಾಜರಾಗಲು ಇಚ್ಛಿಸುವವರು 2 ಪಾಸ್‌ಪೋರ್ಟ್ ಅಳತೆ ಭಾವಚಿತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ)ವನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ/ದೂರವಾಣಿ ಸಂಖ್ಯೆ 0816-2251214ನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may have missed