
No D Group Employees: Sun and Dust for Barantis
ತುಮಕೂರು: ಸರಕಾರ ಸೂಚಿಸಿರುವ ಲಸಿಕೆ ಪಡೆಯುವುದು ಕಡ್ಡಾಯ ಎಂದು ಎಲ್ಲೆಡೆ ವ್ಯಾಪಕ ಪ್ರಚಾರಪಡಿಸುತ್ತಿದೆ ತುಮಕೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ನಗರ ಕುಟುಂಬ ಕಲ್ಯಾಣ ಕೇಂದ್ರ-3ರಲ್ಲಿ ಬಾಣಂತಿಯರು ಹಾಗೂ ಪುಟ್ಟ ಕಂದಮ್ಮಗಳು ಲಸಿಕೆ ಪಡೆಯಲು ಬಂದರೆ 12:30ಕ್ಕೆ ಬೀಗ ಹಾಕಿಕೊಂಡು ಹೋಗುತಿದ್ದು ಇದನ್ನು ಕೇಳುವವರು ಯಾರು ಇಲ್ಲವೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಹೌದು ಏನಿದೂ ಸ್ಟೋರಿ ಅಂತೀರಾ ತುಮಕೂರು ನಗರದ ಜಿಲ್ಲಾ ಆಸ್ಪತ್ರೆಯ ಆವರಣದ ಹಿಂಭಾಗದಲ್ಲಿ ರುವ ನಗರ ಕುಟುಂಬ ಕಲ್ಯಾಣ ಕೇಂದ್ರದಲ್ಲಿ ನವಜಾತ ಶಿಶು ಸೇರಿದಂತೆ ಒಂದು ದಿನ ಮಗುವಿನಿಂದ ಓಂದುವರೆ ವರ್ಷ ಮಗುವಿನವರೆಗೂ ಓಪಿವಿ, ಪೆಂಟಾ, ರೋಟಾ ಪಿಸಿವಿ, ಐಪಿವಿ ಹಾಗೂ ಪೊಲೀಯೋ ಲಸಿಕೆ ನೀಡಲಾಗುತ್ತದೆ. ಸರಕಾರ ಇದನ್ನು ಪ್ರತಿ ಗುರುವಾರ ರಾಜ್ಯದಾಂತ್ಯ ನೀಡಲು ಸೂಚಿಸಿದೆ ಅದರೆ ಇಲ್ಲಿಗೆ ಬರುವ ಬಾಣಂತಿರಿಗೆ ಆಕಾಶವೆ ಚಪ್ಪರ, ಇಲ್ಲಿನ ಧೂಳೇ ಶುದ್ದ ಗಾಳಿಯಾಗಿದೆ.
ನವಜಾತ ಶಿಶುಗಳಿಗೆ ಹಾಗೂ ಒಂದುವರೆ ತಿಂಗಳ ಮಕ್ಕಳಿಗೆ ಓಪಿವಿ, ಹೆಪಟೈಟಿಸ್‌ಬಿ, ಬಿಸಿಜೆ ಲಸಿಕೆ ಹಾಗೂ ಎರಡುವರೆ ತಿಂಗಳಿಗೆ ಓಪಿವಿ, ಪೆಂಟಾ, ರೋಟಾ ಪಿಸಿವಿ, ಐಪಿವಿ ಹಾಗೂ ಪೊಲೀಯೋ ಲಸಿಕೆ ಪಡೆಯಬೇಕು ನಂತರ ಮೂರುವರೆ ತಿಂಗಳಿಗೆ ಹಾಗೂ 10 ತಿಂಗಳ ಕೂಸುಗಳಿಗೆ ಲಸಿಕೆ ಹಾಕಿಸಲು ಇಲ್ಲಿಗೆ ಬಾಣಂತಿಯರು ಬರುತ್ತಾರೆ. ಎಂದಿನAತೆ ಬಾಣಂತಿಯರು ಲಸಿಕೆ ಪಡೆಯಲು ಬಂದಿದ್ದು ಇಲ್ಲಿ ಸಿಬ್ಬಂದಿ 12:30ಕ್ಕೆ ಬೀಗ ಹಾಕಿಕೊಂಡು ಹೋಗುತಿದ್ದು ಇದನ್ನು ಕೇಳುವವರು ಯಾರು ಇಲ್ಲವೆ ಎಂದು ಬರುವ ಬಾಣಂತಿಯರು ಹಿಡಿಶಾಪ ಹಾಕುತ್ತಾ ಹೋಗುತಿದ್ದಾರೆ.
ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿದಾಗ ದೌಡಾಯಿಸಿದ ಆಡಳಿತ ಅಧಿಕಾರಿ 1:28 ಕ್ಕೆ ಬೀಗ ತೆಗೆದಿದ್ದು ಇಲ್ಲಿನ ಆಡಳಿತ ಅಧಿಕಾರಿ ಡಾ ಅನಿತ ಬಿ ಗೌಡ ಎಂಬುವವರನ್ನು ವಿಚಾರಿಸಿದಾಗ ನಮ್ಮಲ್ಲಿ ಡಿ ಗ್ರೂಪ್ ನೌಕರರು ಇಲ್ಲ ಆದ್ದರಿಂದ ಬೀಗ ಹಾಕುತ್ತೇವೆ ಎಂದು ಉಢಾಪೆ ಉತ್ತರ ನೀಡಿದ್ದಾರೆ. ಕನಿಷ್ಠ ಜಿಲ್ಲಾ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರು ಇಲ್ಲವೆಂದು ಗೇಟ್ ಗೆ ಬೀಗ ಹಾಕಿ ಬಾಣಂತಿರನ್ನು ಧೂಳು ಮತ್ತು ಬಿಸಿಲಿನಲ್ಲಿ ಕಾಯಿಸೋದು ಎಷ್ಟು ಸರಿ, ಬಾಣಂತಿಯರು ಹಾಗೂ ಪುಟ್ಟ ಕಂದಮ್ಮಗಳು ಲಸಿಕೆ ಪಡೆಯಲು ಕೇಂದ್ರ ಮುಂಭಾಗದ ಬಿಕ್ಷÄರಂತೆ ಕಾಯಬೇಕೆ ಎಂದು ನರಸಿಂಹರಾಜು, ಎಂ ಸುಲ್ತಾನ್, ಫೌಜಿಯಾ, ಅನಿತಾ ಪ್ರಶ್ನಿಸಿದ್ದಾರೆ.
ಆರೋಗ್ಯ ಸಚಿವರೇ ತುಮಕೂರು ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳು ಮರೀಚಿಕೆಯಾಗಿದ್ದು, ಕಳೆದ ಆರು ತಿಂಗಳಲ್ಲಿ ತಾಯಿ ಮಗು ಸಾವಿನ ಪ್ರಕರಣ, ಮಧುಗಿರಿ ತಾಲ್ಲೂಕಿನಲ್ಲಿ ವೈದ್ಯರು ಮತ್ತು ಆಂಬುಲೆನ್ಸ್ ಸೇವೆ ಸಿಗದೆ ಪುಟ್ಟ ಕಂದಮ್ಮನ ಸಾವಿನ ಪ್ರಕರಣ, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಯಸ್ಸು ದೃಡಿಕರಣ ಪ್ರಮಾಣ ಪತ್ರಕ್ಕೆ ಮದ್ಯವರ್ತಿಗಳ ಹಾವಳಿ ಈ ತರಹ ಹುಡುಕುತ್ತಾ ಹೋದರೆ ಸರಕಾರಿ ಆಸ್ಪತ್ರೆಗಳ ಸ್ಥಿತಿ ಅದೋಗತಿಯಾಗಿದೆ ಎಷ್ಟರ ಮಟ್ಟಿಗೆ ಆರೋಗ್ಯ ಸೇವೆಗಳು ಸಿಗುತ್ತಿವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳುವಿರಾ…?
ಇನ್ನೆಷ್ಟು ಜೀವಗಳು ಬಲಿಯಾಗುವ ಮುನ್ನ ಸುಮಾರು ವರ್ಷಗಳಿಂದ ಗೂಟ ಹಾಕಿಕೊಂಡು ಕುಳಿತಿರು ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಿ ಆರೋಗ್ಯ ಸಚಿವರೇ ಅಮಾಯಕ ಜೀವಗಳನ್ನು ಉಳಿಸಿ..?
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು