web stats

Madhugirinews

#1NewsofMadhugiri

ಪಿ.ಟಿ.ಸಿ.ಎಲ್ ಜಮೀನು ಭೂ ಪರಿವರ್ತನೆಯಾಗಿದ್ದು ಹೇಗೆ..?

Minister of Revenue, see this story

ಮಧುಗಿರಿ: ಕಂದಾಯ ಇಲಾಖೆಯಲ್ಲಿ ಕದಂಬ ಎಂಬ ಬಿರುದು ಪಡೆದ ಸಚಿವರೇ ಓದಲೇಬೇಕಾದ ಈ ಸ್ಟೋರಿ
ಮಕ್ಕಳ ಶಿಕ್ಷಣಕ್ಕಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ಕಾಲ ಮೀತಿ 21 ದಿನ ಬೇಕು. ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಹಾಕಿ ವರ್ಷಾನುಗಟ್ಟಲೆ ಕಾದರು ಸಿಕ್ಕಿಲ್ಲ ಬಡವರಿಗೆ ಬಿಪಿಎಲ್ ಕಾರ್ಡ್..? ಆದ್ರೆ.. ಭೂಪರಿವರ್ತನೆ ಗೆ ಸಕಾಲ ಮಿತಿ ಕೇವಲ 7 ದಿನ ಮಾತ್ರ..? ಕಂದಾಯ ಸಚಿವರೆ ಇದೇನಾ ನಿಮ್ಮ ಆದೇಶ…? ಕಂದಾಯ ಸಚಿವರೆ ನಿಮ್ಮ ಆದೇಶಗಳೆಲ್ಲ ರಿಯಲ್ ಎಸ್ಟೇಟ್, ಉದ್ಯಮಿಗಳ ಪರನಾ..? ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳಿಂದಲೇ ಗೊಲ್ಮಾಲ್. ಹಣದಾಸೆಗೆ ಕಂದಾಯ ಇಲಾಖೆ ಅಧಿಕಾರಿಗಳಿಂದಲೇ ಪಿ.ಟಿ.ಸಿ.ಎಲ್ ಜಮೀನು ಭೂ ಪರಿವರ್ತನೆ ಮಾಡುತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಮಧುಗಿರಿ ಕಸಬಾ ಕಂದಾಯ ಅಧಿಕಾರಿಯಿಂದ ಕಾನೂನು ಉಲ್ಲಂಘನೆ ಹಾಗೂ ಅಕ್ರಮ. ಮಧುಗಿರಿ ಟು ಶಿರಾ ರಾಷ್ಟೀಯ ಹೆದ್ದಾರಿ ಗೆ ಹೊಂದಿಕೊAಡಿರುವ ಕೋಟ್ಯಾಂತರ ರೂ ಬೆಲೆಬಾಳುವ ಫಲವತ್ತಾದ ಜಮಿನು.
ತುಮಕೂರು ಜಿಲ್ಲೆಯ ಮಧುಗಿರಿ ತಾ.ಸಿದ್ದಾಪುರ ಗ್ರಾಮದ ಹೊಸ ಸರ್ವೆ.ನಂ.124ರಲ್ಲಿ 33ಗುಂಟೆ. ಮಂಜೂರು ಜಾಮೀನು ಜಾಗ ಭೂಪರಿವರ್ತನೆ. ಹಳೆ ಸರ್ವೆ.ನಂ54ರ ಸರ್ಕಾರಿ ಗೋಮಾಳದ ಜಮೀನನ್ನು 33ಗುಂಟೆಜಮೀನು ತುಂಗೋಟಪ್ಪ ಬಿನ್ ಕಾರಮರಡಿ ಕೋಟಪ್ಪ ಎಂಬವರಿಗೆ 33ಗುಂಟೆ ಸರ್ಕಾರಿ ಗೋಮಾಳದ ಜಮೀನು ಮಂಜೂರು.
ತುAಗೋಟಪ್ಪನ ಮರಣದ ನಂತರ ಹೆಂಡತಿ ಹರಿಯಮ್ಮ ಹೆಸರಿಗೆ ಪೌತಿ ಖಾತೆ. ಹರಿಯಮ್ಮ ಮತ್ತು ಕುಟುಂಬದವರಿAದ ವೆಂಕಟರಾಮು ಎಂಬುವರಿಗೆ ಕ್ರಯ. ವೆಂಕಟರಾಮು ಎಂಬುವರಿAದ ಕಾಂತರಾಜು ಎಂಬ ವ್ಯಕ್ತಿಗೆ ಮಾರಾಟ. ಈ ಹಿಂದೆ ಕಾಂತರಾಜುಯಿAದ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಕೆ. ಸರ್ಕಾರಿ ಜಾಗ ಆದ ಕಾರಣ ಭೂ ಪರಿವರ್ತನೆ ಗೆ ಅವಕಾಶ ಇಲ್ಲ ಎಂಬುದಾಗಿ ವಿಲೇ ಮಾಡಲಾಗಿತ್ತು.
ಮತ್ತೆ ಅಧಿಕಾರಗಳು ಜಾಮೀಲಾಗಿ ಭೂ ಪರಿವರ್ತನೆ ಸಿದ್ದತೆ. ಪರಿಶಿಷ್ಟರಿಗೆ ಸೇರಿದ ಜಾಗವನ್ನು ಮಾರಾಟ ಮಾಡುವಂತಿಲ್ಲ ಹಾಗೂ ಭೂ ಪರಿವರ್ತನೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ವಿದ್ದರೂ ಲಂಚದ ಆಸೆಗೆ ಬಿದ್ದು. ಭೂ ಪರಿವರ್ತನೆ ಮಾಡಬಹುದು ಎಂದು ತಹಶಿಲ್ದಾರ್ ಗೆ ತಪ್ಪು ವರದಿ ಸಲ್ಲಿಕೆ. ಸರ್ಕಾರಿ ಅಧಿಕಾರಿಗಳಿಂದ ಕಾನೂನು ಉಲ್ಲಂಘನೆ. Pಖಿಅಐ ಖಾಯ್ದೆಗೆ ಒಳಪಡುದಿಲ್ಲ ಎಂದು ಕಂದಾಯ ತನಿಖಾಧಿಕಾರಿಯಿಂದನೇ ತಹಶಿಲ್ದಾರ್ ಗೆ ತಪ್ಪು ವರದಿ ಸಲ್ಲಿಕೆ. ಮಧುಗಿರಿ ಕಸಬಾ ಕಂದಾಯ ತನಿಖಾಧಿಕಾರಿಯಿಂದ ಮೇಲಾಧಿಕಾರಿಗಳಿಗೆ (ತಹಶೀಲ್ದಾರ್ ,ಎಸಿ.ಹಾಗೂ ಡಿ.ಸಿ ಗೆ) ತಪ್ಪು ವರದಿ ಸಲ್ಲಿಕೆ ಮಾಡಲಾಗಿದೆ ಎಂಬುದು ದಾಖಲೆಗಳ ಸಹಿತ ನಮ್ಮ ವಾಹನಿಯಲ್ಲಿ ಲಭ್ಯವಾಗಿದೆ.
ಸಿದ್ದರಾಜು ಮಧುಗಿರಿ ಕಸಬಾ ಕಂದಾಯ ತನಿಖಾಧಿಕಾರಿ ತಹಶೀಲ್ದಾರ್ ರಿಂದ ಭೂಪರಿವರ್ತನೆ ಮಾಡಲು ಜಿಲ್ಲಾಧಿಕಾರಿ ಗಳಿಗೆ ಪ್ರಸ್ತಾವನೆ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಗೆ ಆದೇಶ. ಗ್ರಾಮ ಲೆಕ್ಕ ಆಡಳಿತ ಅಧಿಕಾರಿಗೆ ಇದು ಮಂಜೂರು ಜಾಗ ಎಂಬ ಮಾಹಿತಿ ಇದ್ದರೂ ತಪ್ಪು ಮಾಹಿತಿ ಸಲ್ಲಿಸಿದ್ದೇಕೆ? ಮಧುಗಿರಿ ಕಸಬಾ ಆರ್.ಐ ಸಿದ್ದರಾಜು ನಿಂದ ಅಕ್ರಮ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಲಂಚದ ಆಸೆಗೆ ಭೂ ಪರಿವರ್ತನೆ. ಎಲ್ಲಾ ಗೊತ್ತಿದ್ದು ಕಣ್ಮುಚ್ಚಿ ಕುಳಿತಿರುವ ಸರ್ಕಾರ. ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಹಾಡಿದ್ದೇ ಆಟ ಉಡಿದ್ದೆ ಲಗ್ಗೆಯಂತಾಗಿದೆ.
ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಗುಬ್ಬಿಯಲ್ಲಿ ಸುಮಾರು 27 ಜನ ಜೈಲು ಪಾಲಾಗಿದ್ದು, ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಕಂದಾಯ ಸಚಿವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

You may have missed