web stats

Madhugirinews

#1NewsofMadhugiri

ಸಂಗೀತ ಶಿಕ್ಷಕ ಕೆ.ಆರ್.ಕುಮಾರ್ ಅಮಾನತ್ತು

ತುಮಕೂರು: ಶಿರಾ ತಾಲ್ಲೂಕು ಹುಳಿಗೆರೆ ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ಕೆ.ಆರ್.ಕುಮಾರ್ ರವರು ಅನಕೃತ ಗೈರು ಹಾಜರಾತಿ ಹಾಗೂ ದ್ವಿಪತ್ನಿತ್ವ ಹೊಂದಿದ್ದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ರೇವಣ್ಣಸಿದ್ದಪ್ಪ ಸೇವೆಯಿಂದ ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.

ಶಿಕ್ಷಕ ಕೆ.ಆರ್.ಕುಮಾರ್ ಪ್ರಾಥಮಿಕ ಶಾಲೆಯಿಂದ ಫ್ರೌಢಶಾಲೆಗೆ ಬಡ್ತಿ ಪಡೆದ ನಂತರ 2010 ರ ಆಗಸ್ಟ್ 5 ರಂದು ಕರ್ತವ್ಯಕ್ಕೆ ಹಾಜರಾಗಿ ಶಾಲಾ ಮುಖ್ಯ ಶಿಕ್ಷಕರ ಪೂರ್ವಾನುಮತಿ ಪಡೆಯದೆ 2011ರ ಡಿಸೆಂಬರ್ 4 ರಿಂದ 2022ರ ಜೂನ್ 30 ರವರೆವಿಗೂ 1180 ಕ್ಕಿಂತ ಹೆಚ್ಚು ದಿನಗಳು ಶಾಲಾ ಕರ್ತವ್ಯಕ್ಕೆ ಅನಕೃತ ಗೈರು ಹಾಜರಾಗಿದ್ದಾರೆ.
ಈ ಬಗ್ಗೆ ಮುಖ್ಯ ಶಿಕ್ಷಕರು ಹಲವಾರು ಬಾರಿ ಕರ್ತವ್ಯಕ್ಕೆ ಹಾಜರಾಗಲು ಜ್ಞಾಪನಾ ಪತ್ರದ ಮೂಲಕ ಸೂಚಿಸಿದ್ದರೂ ಸಹ ಕರ್ತವ್ಯಕ್ಕೆ ಅನಕೃತ ಗೈರು ಹಾಜರಾಗುವುದನ್ನು ಮುಂದುವರೆಸಿ ಕೆಲ ಸಂದರ್ಭದಲ್ಲಿ ಅನಾರೋಗ್ಯ ಕಾರಣ ಒಡ್ಡಿ ವೇತನ ರಹಿತ ರಜೆ ಮಂಜೂರು ಮಾಡಲು ಕೋರಿದ್ದರು.
ಇದಲ್ಲದೆ ಮೊದಲನೇ ಹೆಂಡತಿ ಜೀವಂತವಾಗಿದ್ದಾಗಲೇ ಲಕ್ಷ್ಮೀದೇವಿ ಎಂಬುವವರನ್ನು ಇಲಾಖಾ ಅನುಮತಿ ಪಡೆಯದೆ ಅನಕೃತವಾಗಿ ಎರಡನೇ ಮಧುವೆ ಆಗಿರುವುದರ ಬಗ್ಗೆ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may have missed