web stats

Madhugirinews

#1NewsofMadhugiri

ಶಿಕ್ಷಣ ಜೀವನದ ಅಸ್ತ್ರ: ಉದ್ಯಮಿ ಶೇಖ್ ರಸೂಲ್

ಮಧುಗಿರಿ: ವಿದ್ಯಾರ್ಥಿಗಳು ಬಾಲ್ಯದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದಾಗ ಜೀವನದಲ್ಲಿ ಉತ್ತಮ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಶೇಖ್ ರಸೂಲ್ ತಿಳಿಸಿದರು.
ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿ ಮಹದೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಲೇಖನ ಸಾಮಾಗ್ರಿ ಹಾಗೂ ಸಮಸವಸ್ತç ವಿತರಣೆ ಮಾಡಿ ಮಾತನಾಡಿದ ಅವರು ನಗರ ಪ್ರದೇಶಕ್ಕಿಂತ ಗ್ರಾಮೀಣಾ ಭಾಗದಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ ಅವರನ್ನು ಪ್ರೋತ್ಸಾಹಿಸಿದಾಗ ಉತ್ತಮ ಪ್ರಜೆಗಳನ್ನು ಪಡೆಯಬಹುದು ಎಂದರು.

ಮುಖ್ಯ ಶಿಕ್ಷಕ ಎಸ್. ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ದಾನಿಗಳು ನೀಡುವ ಸೌಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು, ಸಮಯ ಪ್ರಜ್ಞೆ ಜತೆ ಶಿಸ್ತನ್ನು ಮೈಗೂಡಿಸಿಕೊಂಡು ಸ್ಪರ್ಧಾತ್ಮಕ ಕಲಿಕೆಯ ಕಡೆ ಹೆಚ್ಚು ಶ್ರದ್ಧೆವಹಿಸಿದರೆ ಉತ್ತನ ಹುದ್ದೆಗಳಿಗೆ ಹೋಗಲು ಸಾಧ್ಯವಾಗಲಿದೆ ಎಂದರು.
ಪ್ರತಿ ವಿದ್ಯಾರ್ಥಿಗೆ ನೋಟ್ ಬುಕ್, ಬ್ಯಾಗ್, 2 ಜತೆ ಸಮವಸ್ತ್ರ ಹಾಗೂ ಐಡಿ ಕಾರ್ಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟಿವಿವಿ ಸಂಸ್ಥೆಯ ಆಡಳಿತಾಧಿಕಾರಿ ಗೌರಿಶಂಕರ್, ಮೇಲ್ವೀಚಾರಕಿ ಶ್ವೇತಾ, ಸಿ.ಆರ್.ಪಿ. ಮಂಜುನಾಥ್, ಹಿರಿಯ ಮುಖಂಡ ಸಿದ್ದಲಿಂಗಪ್ಪ, ಶ್ರೇಯಮ್ಸ್ ಕುಮಾರ್, ಎಸ್. ಮಲ್ಲೇಶ್, ಬೀಮರಾಜ್, ್ಪ, ದೊಡ್ಡೇಗೌಡ, ಶಿವಣ್ಣ, ಶಿಕ್ಷಕರಾದ ಪ್ರಕಾಶ್ ರಾವ್, ನಂಜುAಡಪ್ಪ, ಸೀತಾಲಕ್ಷ್ಮಮ್ಮ, ಆರ್. ಶೃತಿ, ಗೀತಾ, ಶೋಭಾ, ನರಸಿಂಹಮೂರ್ತಿ ಹಾಜರಿದ್ದರು.

You may have missed