
ಮಧುಗಿರಿ: ವ್ಯಾಸಂಗ ಪ್ರಮಾಣಪತ್ರ, ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಬರುತ್ತಿದ್ದ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ನಂ ಪಡೆದು ಎಸ್ ಎಂ ಎಸ್ ಹಾಗೂ ಸಲುಗೆಯಿಂದ ಮಾತನಾಡುತ್ತಿದ್ದ ಶಿಕ್ಷಕನನ್ನು ಡಿಡಿಪಿಐ ಎಂ. ರೇವಣ್ಣಸಿದ್ದಪ್ಪ ನವರು ಅಮಾನತ್ತು ಮಾಡಿದ್ದಾರೆ.
ತಾಲ್ಲೂಕಿನ ದೊಡ್ಡಹಟ್ಟಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಸುರೇಶ್ ಅಮಾನತ್ತಿಗೆ ಒಳಗಾಗಿದ್ದು ಇತ ಶಾಲೆಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ ಹಾಗೂ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆಗಳಿಗೆ ಆಶ್ಲೀಲವಾದ ವಿಡಿಯೋಗಳು ಮತ್ತು ಎಸ್ ಎಂ ಎಸ್ ಗಳನ್ನು ಮಾಡುತ್ತಾ ಸಲುಗೆಯಿಂದ ಮಾತನಾಡುತ್ತಾ ಗ್ರಾಮದ ಯುವಕರನ್ನು ರಾಜಕೀಯ ವಾಗಿ ಸಹಾಯ ಮಾಡುತ್ತೆನೆಂದು ಹೇಳಿ ಗ್ರಾಮದಲ್ಲಿ ಮಧ್ಯಪಾನ ಸೇವನೆ ಮಾಡುತ್ತಿದ್ದರು, ಶಾಲಾ ಅನುದಾನವನ್ನು ದುರ್ಬಳಕೆ ಮಾಡಿರುವುದು ಕಂಡು ಬಂದಿದ್ದು ಶಿಕ್ಷಕನ ವಿರುದ್ಧ ಗ್ರಾಮಸ್ಥರು ಕ್ಷೇತ್ರ ಶಿಕ್ಷಾಣಾಧಿಕಾರಿಗಳಿಗೆ ದೂರು ನೀಡಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು