
ಮಧುಗಿರಿ ನ್ಯೂಸ್ ಡೆಸ್ಕ್
ಮಧುಗಿರಿ: ಜೀವನದಲ್ಲಿ ನಿರಂತರವಾಗಿ ಕಲಿಯುವುದನ್ನು ಪ್ರಾರಂಭಿಸುವುದೇ ಅಕ್ಷರ ಅಭ್ಯಾಸದ ಉದ್ದೇಶವೆಂದು ಸಿದ್ಧರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಧುಗಿರಿ ಪಟ್ಟಣದ ಆರ್ಕಿಡ್ಸ್ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಗ್ರಾಜ್ಯುಯೆಷನ್ ಡೇ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ತಾಯಿ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬAತೆ ಮಗುವಿಗೆ ಯಾವುದು ತಿಳಿದಿಲ್ಲವೋ ಅದು ತಿಳಿಯ ಪಡಿಸುವ ಮೊದಲ ಗುರು ಆಗಿರುತ್ತಾರೆ. ತಾಯಿ ಮಗುವಿನ ಜ್ಞಾನವನ್ನು ತಿಳಿದು ಕೊಂಡು ಶಿಕ್ಷಣ ಕೊಡಿಸಬೇಕು. ತಾಯಿ ಮನಸ್ಸು ಮಾಡಿದರೆ ಜ್ಞಾನ ಇಲ್ಲದವರಿಗೂ ಜ್ಞಾನವನ್ನು ಕೊಡಿಸಬಹುದು .ವಿದ್ಯುತ್ ಬಲ್ಬ್ ಕಂಡುಹಿಡಿದ ಥಾಮಸ್ ಆಲ್ವಾ ಎಡಿಸನ್ ಯಾವುದೇ ಶಾಲೆಗೆ ಹೋಗದೆ ತಾಯಿಯು ನೀಡಿದ ಪ್ರೋತ್ಸಾಹ ದಿಂದ ವಿದ್ಯುತ್ ಬಲ್ಬ್ ಕಂಡುಹಿಡಿದ ಬಗ್ಗೆ ವಿವರಿಸಿದರು.
ಕಲಿಕೆ ಎಂಬುದಕ್ಕೆ ಅಂತ್ಯವಿಲ್ಲ ಜೀವನಪರಿಯಂತ ಕಲಿಯಬಹುದು. ಶಾಲೆಯಲ್ಲಿ ಕೇವಲ ಪದವಿ ಪಡೆಯಲಷ್ಟೆ? ಸಾಧ್ಯ ,ಜೀವನದಲ್ಲಿ ಸಾಕಷ್ಟು ಕಲಿಕೆಗೆ ಜ್ಞಾನ ಅತ್ಯವಶ್ಯಕ. ತಾಯಿ ಸೀಮಂತದಿAದ ಹಿಡಿದು ಮಗುವಿನ ಬೆಳವಣಿಗೆ ತನಕ 16 ಸಂಸ್ಕಾರಗಳನ್ನು ನೋಡಬೇಕಾಗುತ್ತೆ, ಚೌಲಪಾ ಯನ ನಿಂದ ಹಿಡಿದು ವಿದ್ಯಾಭ್ಯಾಸ ಕಲಿಕೆ ವರೆವಿಗೂ ಸಂಸ್ಕಾರ ಗಳಿದ್ದು ಅದರಲ್ಲಿ ಅಕ್ಷರಾಭ್ಯಾಸವು ಕೂಡ ಒಂದು ಸಂಸ್ಕಾರವೆAದರು.
ಶಿಕ್ಷಕರ ಪ್ರಯತ್ನದಿಂದ ಎಲ್ಲರೂ ಬುದ್ಧಿವಂತರಾಗಲು ಸಾಧ್ಯ ವಿಲ್ಲ ದೈವ ಸ್ವರೂಪ ಪ್ರಾಪ್ತಿ ಯಾಗಬೇಕು. ಶಾಲೆಗೆ ಹೋದವರೆಲ್ಲ ಬುದ್ಧಿವಂತರಾಗುತ್ತಾರೆ ಎನ್ನುವುದಾದರೆ ಅಜ್ಞಾನಿಗಳು ಯಾರುಇರುತ್ತಿರಲಿಲ್ಲವೆಂದರು. ಪಾಯದ ಪೂಜೆ ,ಅಂಗಡಿ ವ್ಯಾಪಾರ ಮಾಡುವಾಗ ಪೂಜೆ ಮಾಡುವಂತೆ ಸಹ ವಿದ್ಯಾ ಯನ್ನು ಕಲಿಕೆಗೆ ಅಕ್ಷರಾಭ್ಯಾಸ ಒಂದು ಭಾಗವಾಗಿದೆ .ಮಗು ಜ್ಞಾನ ಪಡೆಯಬೇಕಾದರೆ ದೇವರನ್ನು ಪ್ರಾರ್ಥಿಸುವ ಸಲುವಾಗಿ ಈ ಅಕ್ಷರಾಭ್ಯಾಸ ವೆಂದು ಅಕ್ಷರಾಭ್ಯಾಸದ ಮಹತ್ವವನ್ನು ತಿಳಿಸಿದರು. ಮುಖ್ಯ ಶಿಕ್ಷಕಿ ಉಷಾ ಅನಂತ್, ಶ್ರೀಶೈಲಾ, ಮಾಲಾ, ಚೈತ್ರ, ಹರಿಪ್ರಸಾದ್, ಶಂಕರರಾಜು, ಕಲಾವತಿ, ಕಲ್ಪನಾ ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು