
ತುಮಕೂರು: ಎಲ್ಲಾ ಮಕ್ಕಳು ಪ್ರತಿನಿತ್ಯ ಕ್ರೀಡಾ ಚಟುವಟಿಕೆಗ ಳಲ್ಲಿ ತೊಡಗಿಸಿಕೊಂಡು ದೈಹಿಕ , ಮಾನಸಿಕವಾಗಿ ಸಬಲರಾಗಿ, ಸದೃಢ ಸಮಾಜ ನಿರ್ಮಾಣ ಮಾಡಬೇಕು ಎಂದು ನಾಗವಲ್ಲಿ ಕೆಪಿಎಸ್ ಶಾಲೆ ಪ್ರಾಂಶುಪಾಲ ಇ.ರಾಜಪ್ಪ ಹೇಳಿದರು. ತಾಲೂಕಿನ ನಾಗವಲ್ಲಿ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಹಂತದ ಕ್ರೀಡಾಕೂಟದ ಉದ್ಘಾಟಿಸಿ ಮಾತನಾಡಿದ ಅವರು ಹಣ ಕಳೆದುಕೊಂಡರೆ ಮತ್ತೆ ಗಳಿಸಬಹುದು, ಆದರೆ, ಆರೋಗ್ಯ ಕಳೆದುಕೊಂಡರೆ ಎಲ್ಲ ಕಳೆದುಕೊಂಡAತೆ, ಅದಕ್ಕಾಗಿ ದಿನನಿತ್ಯ ಒಂದಲ್ಲ ಒಂದು ಕ್ರೀಡೆ, ವ್ಯಾಯಾಮದಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದರು.
ಎಲ್ಲರ ಮನಸ್ಸು ಗೆಲ್ಲುವ ಶಕ್ತಿ ಇರುವುದು ಕೇವಲ ಆಟಕ್ಕೆ ಮಾತ್ರ. ಆದರೆ ಕಳೆದ ಎರಡು ವರ್ಷಗಳಿಂದ ಕರೋನ ಮಕ್ಕಳನ್ನು ವಿಮುಖರನ್ನಾಗಿ ಮಾಡಿತ್ತು. ಈಗ ಅದರಿಂದ ಹೊರಬರಲು ಮಕ್ಕಳು ಹೆಚ್ಚು ಹೆಚ್ಚು ಆಟವಾಡಿ ಸಂತಸದ ಬದುಕು ಕಟ್ಟಿಕೊಂಡು, ನಾಯಕತ್ವ ದ ಗುಣ ಬೆಳಸಿಕೊಳ್ಳಿ ಎಂದು ನುಡಿದರು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತೆ ಎನ್ನುವ ಮಾತಿನಂತೆ ಮಕ್ಕಳು ಆಟಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿದಾಗ, ಸೋಲು ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ ಎಂದು ಡಯಟ್ ಉಪಸ್ಯಾಸಕಿ ಶೈಲಜಾಕುಮಾರಿ ಕ್ರೀಡಾಜ್ಯೋತಿ ಸ್ವೀಕರಿಸಿ ಹೇಳಿದರು.
ಕ್ರೀಡಾಕೂಟದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಖಾಲಿದ್ ಅಹ್ಮದ್, ಉಪಪ್ರಾಂಶುಪಾಲರಾದ ಕೆ.ಎಚ್.ರಾಮಚಂದ್ರ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಪರಮೇಶ್ವರಪ್ಪ, ಶಾಲಾ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು. ಹಿರಿಯ ಶಿಕ್ಷಕ ರಾಮಕೃಷ್ಣ ಅವರು ಪ್ರಾರ್ಥನೆ ಹಾಡಿದರು. ಶಿಕ್ಷಕರಾದ ಸುರೇಶ್ ಅವರು ಸ್ವಾಗತಿಸಿದರು. ಶಿಕ್ಷಕ ಗೌರಿಶಂಕರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಿ.ಎಂ.ಅನಿಲ್‌ಕುಮಾರ್ ನಿರೂಪಿಸಿ ಕ್ರೀಡಾಕೂಟ ಸಂಘಟಿಸಿದರು. ಮೇಲಾಟಗಳು ಮತ್ತು ಗುಂಪು ಆಟಗಳನ್ನು ನಡೆಸಲಾಯಿತು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು