web stats

Madhugirinews

#1NewsofMadhugiri

ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿರಲು ಕರೆ

ತುಮಕೂರು: ವಿದ್ಯಾರ್ಥಿಗಳು ಯಾವುದೆ ದುಶ್ಚಟಗಳಿಗೆ ದಾಸರಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಒತ್ತು ನೀಡಿಬೇಕು ಎಂದು ಪಿ.ಎಸ್.ಐ.ಮೂರ್ತಿ ಕರೆ ನೀಡಿದರು.
ಜಿಲ್ಲೆಯ ಹುಳಿಯಾರು ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ಮುಕ್ತ ಸಮಾಜ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು ಮಾದಕ ವಸ್ತುಗಳಿಂದ ದೂರವಿರಬೆಕು, ನಿಮ್ಮ ಪೋಷಕರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಿ, ಉತ್ತಮ ಶಿಕ್ಷಣ ಪಡೆಯಬೇಕು, ಹೆಚ್ಚು ಅಂಕ ಪಡೆಯುವಂತೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲು ಸಹಾ ಹೆಚ್ಚು ಅಂಕ ಪಡೆದು ಉನ್ನತ ಹುದ್ದೆಗಳನ್ನ ಅಲಂಕರಿಸುವತ್ತ ಹೆಚ್ಚು ಗುರಿಯನ್ನ ಇಟ್ಟುಕೊಂಡು ಜಯಗಳಿಸುವಂತೆ ತಿಳಿಸಿದರು. ಸಮಾಜದಲ್ಲಿ ನೊಂದ ಜನರಿಗೆ ತಮ್ಮ ಕೆ`ಲಾದ ಸಹಾಯವನ್ನ ಮಾಡುವಂತ ಮನೋಬಾವ ರೂಡಿಸಿಕೊಳ್ಳಿ ಎಂದರು.
ಈ ಕಾರ್ಯಕ್ರಮದಲ್ಲಿ ಎ.ಎಸ್.ಐ.ಶಾಂತಕುಮಾರ್, ಪ್ರಾಂಶುಪಾಲರಾದ ಪ್ರೊ.ವೀರಣ್ಣ ಮಾತನಾಡಿದರು. ಈ ವೇಳೆ ಎನ್,ಎಸ್,ಎಸ್, ಅಕಾರಿ ಡಾ.ಮೋಹನ್ ಕುಮಾರ್, ಡಾ.ಜಯಶ್ರೀ, ಉಪನ್ಯಾಸಕರಾದ ಡಾ.ಸುಷ್ಮಾ ಎಲ್ ಬಿರಾದಾರ್, ಡಾ.ಲೋಕೇಶ್ ನಾಯ್ಕ್, ಮಂಜುನಾಥ್, ಹಾಗೂ ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

You may have missed