
ಮಧುಗಿರಿ ನ್ಯೂಸ್ ಡೆಸ್ಕ್
ಮಧುಗಿರಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಮಧುಗಿರಿ ಹಾಗೂ ಪುರಸಭೆ ಕಾರ್ಯಾಲಯ ಹಾಗೂ ಚಿರಕ್ಕ್ ಪಬ್ಲಿಕ್ ಸ್ಕೂಲ್ ಇವರ ಸಂಯುಕ್ತಾಶ್ರಯದಲ್ಲಿ ಮಾಲಿ ಮರಿಯಪ್ಪ ರಂಗಮAದಿರದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು
ಮಧುಗಿರಿ ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈ ವರ್ಷದ ದೈವ ವಾಕ್ಯ ಒಂದೇ ಒಂದು ಭೂಮಿ ಎನ್ನುವ ವಾಕ್ಯದ ಜೊತೆಗೆ ಮಣ್ಣನ್ನು ಉಳಿಸಿ ಪರಿಸರ ರಕ್ಷಿಸಿ ಎಂದು ಸಾರ್ವಜನಿಕರಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಮಧುಗಿರಿ ಹಾಗೂ ಪುರಸಭೆ ಕಾರ್ಯಾಲಯ ಆಗುತ್ತಿರ ಪಬ್ಲಿಕ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಲ್ಲಿ ಮಣ್ಣಿಲ್ಲದೆ ಭೂಮಿಯಿಲ್ಲ ಭೂಮಿ ಇಲ್ಲದೆ ಹಸಿರಿಲ್ಲ ಹಸಿರಿಲ್ಲದೆ ಜೀವ ಸಂಕುಲವಿಲ್ಲ ಹಾಗೂ ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಮಣ್ಣನ್ನು ಉಳಿಸಿ ಎಂಬ ಕೂಗನ್ನು ಕೂಗುತ್ತ ಜಾಗೃತಿ ಜಾಥಾವನ್ನು ತಾಲೂಕು ದಂಡಾಧಿಕಾರಿ ಸುರೇಶಚಾರ್ ಚಾಲನೆ ನೀಡಿದರು.
ಪಟ್ಟಣದ ಮಾಲಿ ಮರಿಯಪ್ಪ ರಂಗ ಮಂದಿರದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕುರಿತು ಸುರೇಶಚಾರ್ ಮಾತನಾಡಿ ಈ ತರ ಪರಿಸರ ಉಳಿಸುವುದನ್ನು ಸ್ವಾಭಾವಿಕವಾಗಿ ಮನುಷ್ಯರು ಕೃತಕವಾಗಿ ಸಂರಕ್ಷಣೆ ಮಾಡಬೇಕು ಹಾಗೂ ಶೇಕಡ 20 ಪರ್ಸೆಂಟ್ ಪ್ರದೇಶ ಕಾಡ ಇರಬೇಕೆನ್ನುವ ನಮ್ಮ ಕನಸು ಇತ್ತೀಚಿನ ದಿನಗಳಲ್ಲಿ ಕನಸಾಗೇ ಉಳಿದಿದೆ ಆದ್ದರಿಂದ ನಾವು ಎಲ್ಲರೂ ಜೊತೆಗೂಡಿ ಸೇರಿ ಗಿಡ ನೆಡುವುದರ ಮುಖಾಂತರ ಪರಿಸರ ಸಮತೋಲನ ಕಾಪಾಡಿಕೊಂಡರೆ ನಮ್ಮ ಮುಂದಿನ ಪೀಳಿಗೆಗೆ ಬದುಕಿಗೆ ಅಗತ್ಯವಿರುವ ಆಮ್ಲಜನಕವನ್ನು ಪಡೆಯಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಖಾಸಗಿ ಶಾಲೆಯ ಸಂಘದ ಅಧ್ಯಕ್ಷರು ಭಾಸ್ಕರ್ ರೆಡ್ಡಿ ಪುರಸಭೆ ಅಧಿಕಾರಿ ನಜ್ಮ ಮೇಡಂ ಚಿರಕ್ಕ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶೈಲಶ್ರೀ ಗೈಡ್ ಆಯುಕ್ತೆ ಲತಾ ನಾರಾಯಣ ಸ್ಕೌಟ್ಸ್ ಜಿಲ್ಲಾ ಕಾರ್ಯದರ್ಶಿ ತಿಮ್ಮರಾಜು ಸ್ಕೌಟ್ಸ್ ಆಯುಕ್ತರಾದ ಅನಂತ ಕೃಷ್ಣ ಹಾಗೂ ಚಿರಕ್ ಶಾಲೆಯ ಶಿಕ್ಷಕರು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು