web stats

Madhugirinews

#1NewsofMadhugiri

ಟೂಡಾ ಅಧ್ಯಕ್ಷರಾಗಿ ಹೆಚ್.ಜಿ. ಚಂದ್ರಶೇಖರ್ ಆಯ್ಕೆ

ತುಮಕೂರು:ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರನ್ನಾಗಿ ಬಟವಾಡಿಯ ಹೆಚ್.ಜಿ. ಚಂದ್ರಶೇಖರ್ ಅವರನ್ನು ಸರಕಾರ ನೇಮಕ ಮಾಡಿ ಆದೇಶಿಸಿದೆ. ಸದಸ್ಯರುಗಳನ್ನಾಗಿ ಸತ್ಯಮಂಗಲದ ಎಸ್.ಹೆಚ್. ಜಗದೀಶ್, ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ನ ಮಾಯರಂಗಣ್ಣ, ಸಿರಾಗೇಟ್ ಟೂಡಾ ಲೇಔಟ್‌ನ ಸಿ.ಹೆಚ್. ನಾಗರತ್ನ ಅವರನ್ನು ಸರ್ಕಾರ ನೇಮಕ ಮಾಡಿದೆ. ಈ ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ನೇಮಕ ಮಾಡಿರುವುದಾಗಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

You may have missed