
ಮಧುಗಿರಿ: ಬೇಟೆಯಾಡಲು ಬಂದಾಗ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಬಲೆಗೆ ಕೆಡುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ತಿಂಗಳೂರು-ಯಾಕರ‍್ಲಹಳ್ಳಿ ರಸ್ತೆಯಲ್ಲಿ ಪಕ್ಕದ ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿ ರಮಾಪುರದ ಚಲಪತಿ, ಶಿವಕುಮಾರ್, ನಾಗೇಶ್ ಸುದೀಪ್ ಎಂಬ ನಾಲ್ವರು ಮೊಲ ಭೇಟಿಯಾಡಲು ಬಂದಿದ್ದು ಈ ಹಿಂದೆ ಚಲಪತಿ ಮತ್ತು ಸುದೀಪ್ ನಡುವೆ ಮೊಲದ ವಿಚಾರದಲ್ಲಿ ಗಲಾಟೆಯಾಗಿ ಹಳೆ ವೈಷಮ್ಯ ಬೆಳೆದಿತ್ತು ಎನ್ನಲಾಗಿದೆ.


ಮತ್ತೆ ಬೇಟೆಯಾಡಲು ಹೋಗುವ ನೆಪ ಕಟ್ಟಿದ್ದ ಚಲಪತಿ ಮಧುಗಿರಿ ತಾಲ್ಲೂಕಿನ ಗಡಿಭಾಗದ ಕೊಡಿಗೇನಹಳ್ಳಿಯ ತಿಂಗಳೂರು ಸಮೀಪದಲ್ಲಿ ಬೇಟೆಯಾಡಲು ಬಂದ ವೇಳೆ ಕೊಲೆ ಮಾಡಿ ಅಪಘಾತ ಮಾಡಿದಂತೆ ಮೃತ ದೇಹವನ್ನು ಬಿಸಾಡಿ ಎಸ್ಕೇಪ್ ಆಗಿದ್ದರು. ಈ ಬಗ್ಗೆ ಕೊಡಿಗೇನಹಳ್ಳಿ ಠಾಣೆಯಲ್ಲಿ 304 ಕಾಯ್ದೆಯಡಿ ಅಪರಿಚಿತ ಶವ ಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಬೇಧಿಸಿ ಡಿವೈಎಸ್ಪಿ ರಾಮಕೃಷ್ಣ ಸಿಪಿಐ ಎಂ.ಎಸ್ ಸರ್ದಾರ್, ಪಿಎಸೈ ನಾಗರಾಜು ಅವರು ತನಿಖೆ ಕೈಗೊಂಡ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂಇದ್ದು ಆರೋಪಿಗಳಾದ ಚಲಪತಿ ಬಿನ್ ಗಂಗಪ್ಪ 45 ವರ್ಷ, ಶಿವಕುಮಾರ್ ಬಿನ್ ಚಿಕ್ಕಪ್ಪಯ್ಯ 42 ವರ್ಷ, ನಾಗೇಶ್ ಬಿನ್ ಸುಭ್ರಮಣ್ಯ 25 ವರ್ಷ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು