web stats

Madhugirinews

#1NewsofMadhugiri

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಪ್ರಕೃತಿಯ ಸೊಬಗಿನ ಮಧು ಫಾಲ್ಸ್

ನ್ಯೂಸ್ ಡೆಸ್ಕ್ ವಿಶೇಷ ವರದಿ
ಮಧುಗಿರಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಸತತ ವರ್ಷದಾರೆಯಿಂದಾಗಿ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದು, ಪಟ್ಟಣದ ಸಮೀಪದಲ್ಲೇ ಇದ್ದರೂ ಇಷ್ಟು ದಿನ ಕಣ್ಣಿಗೆ ಕಾಣದಂತಿದ್ದ ಪ್ರಕೃತಿಯ ಸೊಬಗಿನಿಂದ ತುಂಬಿಕೊAಡಿರುವ ಜಲಧಾರೆಯೊಂದು ಪತ್ತೆಯಾಗಿದ್ದು, ಪಟ್ಟಣದ ಜನತೆಯ ಪಿಕ್ ನಿಕ್ ತಾಣವಾಗಿ ಮಾರ್ಪಟ್ಟಿದೆ.
ಮಳೆಗೆ ಪ್ರತ್ಯಕ್ಷವಾದ ಜಲಧಾರೆ: ಇಷ್ಟು ದಿನ ಜಲಧಾರೆಯ ತಾಣಗಳನ್ನು ಅರಸಿ ಇತರೆ ಭಾಗಗಳಿಗೆ ಹೋಗುತ್ತಿದ್ದ ಜನತೆ ಇಲ್ಲಿನ ಪ್ರಕೃತಿಯ ಸೊಬಗಿನಿಂದ ತುಂಬಿಕೊAಡಿರುವ ಜಮಧಾರೆಯನ್ನು ಕಂಡು ಮೂಕ ವಿಸ್ಮಿತರಾಗಿದ್ದಾರೆ. ಪ್ರತೀ ದಿನ ಸುತ್ತಮುತ್ತಲ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು, ಪಿಕ್ ನಿಕ್ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದ್ದು, ಕುಟುಂಬದೊAದಿಗೆ ತೆರಳುವ ಜನತೆ ಜಲಧಾರೆಯಲ್ಲಿ ಮಿಂದು ಹರ್ಷ ವ್ಯಕ್ತಪಡಿಸುತ್ತಿದ್ದು, ಸೆಲ್ಫಿಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದು ಮಕ್ಕಳ ನೆಚ್ಚಿನ ತಾಣವಾಗಿದ್ದು, ಶಾಲಾ ಮಕ್ಕಳಿಗೂ ಇದರ ಪರಿಚಯ ಮಾಡಿಸಬೇಕಿದೆ.
ಮಧುಗಿರಿ-ತುಮಕೂರು ರಸ್ತೆಯಲ್ಲಿರುವ ಕಾರ್ಡಿಯಲ್ ಇಂಟರ್ ನ್ಯಾಶನಲ್ ಶಾಲೆಯ ರಸ್ತೆಯಲ್ಲಿ ಹೋದರೆ ಹರಿಹರೇಶ್ವರ ದೇವಸ್ಥಾನ, ಕಮ್ಮನಕೋಟೆ ನಂತರ ಕೆ.ಸಿ.ರೊಪ್ಪಕ್ಕೆ ಹೋಗುವ ರಸ್ತೆಯಲ್ಲಿ ೩೦೦ ಮೀಟರ್ ಗುಡ್ಡದ ರಸ್ತೆ ಹತ್ತಿ ಇಳಿದರೆ ಸುಂದರ ಜಲಧಾರೆ ಕಣ್ಣಿಗೆ ಬೀಳಲಿದೆ. ಇಲ್ಲಿನ ಪ್ರದೇಶ ಪ್ರಕೃತಿಯ ಸೊಬಗಿನಿಂದ ತುಂಬಿಕೊAಡಿದ್ದು, ಬಹಳಷ್ಟು ಸುಂದರವಾಗಿದೆ.

ಬೆಟ್ಟ-ಗುಡ್ಡಗಳ ಸಾಲಿನಿಂದ ಇಳಿದು ಬರುವ ಜಲಧಾರೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಷ್ಟು ದಿನ ಅಗೋಚರವಾಗಿದ್ದ ಈ ಜನಧಾರೆಯನ್ನು ಕುರಿಗಾಹಿಗಳು ನೋಡಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ನಂತರ ಎಲ್ಲರಿಗೂ ವಿಷಯ ವೈರಲ್ ಆಗಿದ್ದು ಪ್ರಕೃತಿಯ ಸೊಬಗನ್ನು ಚಿತ್ರಿಸಿ ಜಾಲತಾಣದಲ್ಲಿ ಹರಿ ಬಿಟ್ಟ ನಂತರ ಜನಸಾಗರವೇ ಹರಿದು ಬರುತ್ತಿದೆ. ಈ ಜಲಧಾರೆಗೆ ಮಧುಗಿರಿ ಫಾಲ್ಸ್ ಎಂಬುದಾಗಿ ಸ್ಥಳಿಯರು ನಾಮಕರಣ ಮಾಡಿದ್ದು, ಅದೇ ಹೆಸರು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆದಷ್ಟು ಅಲ್ಲದೇ ಕಮ್ಮನ ಕೋಟೆಯಿಂದ ಮಧುಗಿರಿ ಫಾಲ್ಸ್ ಗೆ ಹೋಗುವ ದಾರಿಯು ಬಹಳಷ್ಟು ಹದಗೆಟ್ಟಿದ್ದು ಇದರ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಮಧುಗಿರಿಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ನಿರಂತರ ಒತ್ತಾಯ ಗಳು ಕೇಳಿ ಬರುತ್ತಿದ್ದು, ಪ್ರವಾಸೋದ್ಯಮ ಕೇಂದ್ರವಾಗಿ ಘೋಷಣೆೆಯಾದಲ್ಲಿ ಇಂತಹ ಮತ್ತಷ್ಟು ಸುಂದರ ತಾಣಗಳು ಪ್ರವಾಸಿಗರ ಕಣ್ಣಿಗೆ ಗೋಚರಿಸಲಿವೆ. ಇಲ್ಲಿ ಇಷ್ಟೊಂದು ಸುಂದರವಾದ ಜಲಧಾರೆ ಇದೆ ಎಂಬುದು ಹೊರಗಿನ ಜಗತ್ತಿಗೆ ಗೊತ್ತೇ ಇರಲಿಲ್ಲ. ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯಂದಾಗಿ ಸ್ಥಳೀಯ ಕುರಿಗಾಹಿಗಳು ಜಾಲ ತಾಣದಲ್ಲಿ ಹರಿ ಬಿಟ್ಟಿದ್ದು, ಕೆಲವರಿಗೆ ತಿಳಿದಿದೆ.
ಮಧುಗಿರಿ ಬೆಟ್ಟದ ಹಿಂಭಾಗದಲ್ಲಿರುವ ಪ್ರಕೃತಿಯ ಸೊಬಗಿನಿಂದ ತುಂಬಿಕೊAಡಿರುವ ಮಧು ಫಾಲ್ಸ್ ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದ್ದು, ಈ ಭಾಗದಲ್ಲಿರುವ ಹರಿಹರೇಶ್ವರ ದೇವಸ್ಥಾನ ಬಹಳ ಅಪರೂಪದ್ದಾಗಿದ್ದು, ಸಮೀಪದಲ್ಲೇ ಗರಿಕೆ ಮರದ ಹಟ್ಟಿ ಮಾರಮ್ಮ ದೇವಸ್ಥಾನದ ದರ್ಶನ ಭಾಗ್ಯವೂ ಪ್ರವಾಸಿಗರಿಗೆ ದೊರೆಯಲಿದೆ. ಇಲ್ಲಿನ ತಾಲೂಕು ಆಡಳಿತ ಈ ಜಲಧಾರೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೆಚ್ಚು ಪ್ರಚಾರ ನೀಡಿ ಇದನ್ನು ಹೊರ ಪ್ರಪಂಚಕ್ಕೆ ತಿಳಿಸಿಕೊಡುವ ಕೆಲಸ ಮಾಡಬೇಕಿದೆ. ಇದರಿಂದ ಮೋಜು ಮಸ್ತಿಗಾಗಿ ಬಹಳಷ್ಟು ದೂರದ ಪ್ರದೇಶಗಳನ್ನು ಅರಸಿ ಹೋಗುವ ಪ್ರವಾಸಿಗರು ಇತ್ತ ಮುಖ ಮಾಡಬಹುದು. ಅಲ್ಲದೇ ವೀಕೆಂಡ್ ನಲ್ಲಿ ಮಧುಗಿರಿ ಏಕ ಶಿಲಾ ಬೆಟ್ಟವನ್ನು ಏರಲು ಬಹಳಷ್ಟು ಪ್ರವಾಸಿಗರು ಆಗಮಿಸಲಿದ್ದು, ಈ ಭಾಗದಲ್ಲೂ ಸುಂದರ ಜಲಧಾರೆ ಇದೆ ಎಂಬುದನ್ನು ಪರಿಚಯ ಮಾಡಿಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಪ್ರವಾಸಿಗರನ್ನು ಸೆಳೆಯಲಿದೆ. ಇದರಿಂದ ಈ ಭಾಗದಲ್ಲಿ ವ್ಯಾಪಾರೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

You may have missed