web stats

Madhugirinews

#1NewsofMadhugiri

ಹೈನುಗಾರಿಕೆ ಜತೆ ಸಮಾಜಿ ಮುಖಿ ಕೆಲಸಗಳ ಮಾಡುತ್ತಿರುವ ಕೊಂಡವಾಡಿ ಚಂಧ್ರಶೇಖರ್

(ಮುಂದುವರೆ ಭಾಗ)

ವಾರದ ವ್ಯಕ್ತಿ ವಿಶೇಷ ಲೇಖನ

ಹೈನುಗಾರಿಕೆಯಲ್ಲಿ ಅದೆಷ್ಟೋ ಮಂದಿ ರಾಜಕೀಯವಾಗಿ ಬೆಳಿದಿದ್ದು ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಹೈನುಗಾರಿಕೆ ಜತೆಗೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದು ತಾಲ್ಲೂಕಿನ ಹೈನುಗಾರರ ರಕ್ಷಕರಾಗಿ ತನ್ನ ಸ್ವಾಭಿಮಾನವನ್ನು ಮೆರೆಯುತಿದ್ದಾರೆ. ಹೌದು ಹಾಗಿದ್ದರೆ ಕೊಂಡವಾಡಿ ಚಂಧ್ರಶೇಖರ್ ಮಾಡಿದ್ದದ್ದಾರು ಏನು ಎಂಬುದು ಈ ಸಂಚಿಕೆಯಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ

ಮಧುಗಿರಿಯಲ್ಲಿ ಸಂಘಗಳ ಅಭಿವೃದ್ಧಿ ಸ್ಥಿತಿಗತಿ ಹೀಗಿದೆ.

ಮಧುಗಿರಿಯಲ್ಲಿ ನೂತನವಾಗಿ 31 ಸಂಘಗಳ ಸ್ಥಾಪನೆ ಮಾಡಿದ್ದು 8 ಸಂಘಗಳು ಪ್ರಾರಂಭದ ಹಂತದಲ್ಲಿವೆ. 2013 ರಿಂದ ಇಲ್ಲಿಯವರೆಗೂ 52 ನೂತನ ಕಟ್ಟಡ ನಿರ್ಮಾಣ, ಸಭಾಂಗಣ ನಿರ್ಮಾಣ ಮಾಡಲು 20 ಸಂಘಗಳಿಗೆ ನೀಡಲಾಗಿದೆ. ಕಟ್ಟಡ ರಿಪೇರಿ 9 ಸಂಘಗಳಿಗೆ ಅನುದಾನ ನೀಡಲಾಗಿದೆ. ಮಧುಗಿರಿ ಶೀಥಲಕೇಂದ್ರ ಆವರಣದಲ್ಲಿ ಮಧುಗಿರಿ ತಾಲ್ಲೂಕಿನಲ್ಲಿ ನೂತನ ತುಮುಲ್ ಉಪಕೇಂದ್ರ ಕಛೇರಿ ಪ್ರಾರಂಭ. ವಸತಿ ನಿಲಯ ಸ್ಥಾಪನೆ ಮಾಡಲಾಗಿದೆ. ಶೀಥೀಲಕರಣ ಆವರಣದ ಸುತ್ತ ಕಾಂಪೌAಡ್ ನಿರ್ಮಾಣ ಮಾಡಲಾಗಿದೆ. ಮಧುಗಿರಿಯಲ್ಲಿ ಒಟ್ಟು 155 ಸಂಘಗಳು ಹಾಲು ಶೇಖರಣೆಯಲ್ಲಿವೆ. 32700 ಸಂಗದ ಸದಸ್ಯರಿದ್ದಾರೆ. ಒಟ್ಟು 9116 ಹಾಲು ಹಾಕುವ ಸದಸ್ಯರಿದ್ದರು. ಪ್ರಸ್ತುತ ಪ್ರತಿದಿನ 77737 ಲೀ ಹಾಲು ಶೇಖರಣೆಯಾಗುತ್ತಿದೆ. 2021 ರಲ್ಲಿ 82, 500 ಲೀ ಅತಿ ಹೆಚ್ಚು ಹಾಲು ಶೇಖರಣೆಯಾಗಿದ್ದು ದಾಖಲೆಯಾಗಿದೆ

ಸಂಘದ ಸದಸ್ಯರ ಆರೋಗ್ಯ ಕಾಪಾಡುವ ನಾಯಕ

ಮಾರ್ಚ್-29 2022 ರಂದು ಹಾಲು ಉತ್ಪಾದಕರಿಗೆ ಬೃಹತ್ ಆರೋಗ್ಯ ತಪಾಸಣಾ ಆಯೋಜನೆ ಮಾಡಲಾಗಿದ್ದು ಸುಮಾರು 4 ಸಾವಿರ ಜನ ಭಾಗವಹಿಸಿದ್ದರು. ಸಂಘದ ಸದಸ್ಯರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. 250 ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. 40 ವೃದ್ದರಿಗೆ ವಾಕರ್ & ಸ್ಟಿಕ್‌ಗಳನ್ನು ವಿತರಿಸಲಾಯಿತು. ತುಮುಲ್ ವತಿಯಿಂದ 10, 000 ಮಾಸ್ಕ್ ಗಳನ್ನು ಉತ್ಪಾದಕರಿಗೆ ವಿತರಣೆ, ಎರಡನೇ ಅಲೆಯಲ್ಲಿ ವೈಯಕ್ತಿಕವಾಗಿ 10,000 ಮಾಸ್ಟ್ಗಳನ್ನು ವಿತರಣೆ ಮಾಡಲಾಗಿದೆ. ಸಂಘದ 400 ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಪೇಸ್‌ಶೀಲ್ ಮಾಸ್ಕ್, ಗ್ಲೌಸ್ ವೈಯಕ್ತಿಕವಾಗಿ ವಿತರಣೆ ಮಾಡಲಾಗಿದೆ. ಕೋವಿಡ್-19 ನಲ್ಲಿ ಪತ್ರಕರ್ತರಿಗೆ ಫುಡ್‌ಕೆಟ್ ನೀಡಲಾಯಿತು. ದಿನನಿತ್ಯ ಹಾಲು ವಿತರಿಸಲಾಗಿದೆ. ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ನಂದಿನಿ ಸುಗಂಧ ಹಾಲು ಉಚಿತವಾಗಿ ವಿತರಿಸಲಾಯಿತು. ಕೋವಿಡ್-19 ಸಂದರ್ಭದಲ್ಲಿ ದಿನನಿತ್ಯ ಆರಕ್ಷಕ ಇಲಾಖೆಯವರಿಗೆ ಮಜ್ಜಿಗೆ ನೀಡಲಾಯಿತು.

ತುಮುಲ್ ವತಿಯಿಂದ ಅತಿ ಹೆಚ್ಚು ಪ್ರಯೋಜನ ಪಡೆದ ಮಧುಗಿರಿ ಸಂಘಗಳ ಸದಸ್ಯರು

ಮಧುಗಿರಿ ವ್ಯಾಪ್ತಿಯಲ್ಲಿ ತುಮುಲ್ ಟ್ರಸ್ಟ್ ಆರಂಭದ ನಂತರ 2017 ರಿಂದ 2022 ವರೆಗೆ ತುಮುಲ್ ವತಿಯಿಂದ ಅತಿ ಹೆಚ್ಚು ಪ್ರಯೋಜನ ಪಡೆದುಕೊಂಡಿದ್ದಾರೆ. ಸಂಘದ 290 ಜನ ಸದಸ್ಯರು ಮರಣ ಹೊಂದಿದ್ದು ತಲಾ 50 ಸಾವಿರ ಅರ್ಥಿಕ ಸಹಾಯ ಮಾಡಿದ್ದು ಒಟ್ಟು 1 ಕೋಟಿ 45 ಲಕ್ಷ ರೂಗಳು ವಿತರಣೆ ಮಾಡಲಾಗಿದೆ. ಕೋವಿಡ್ ಸೋಂಕಿನಿAದ ಮೃತಪಟ್ಟಿದ್ದು 31 ಜನಸದಸ್ಯರ ಕುಟುಂಬಕ್ಕೆ 1ಲಕ್ಷದಂತೆ 31 ಲಕ್ಷ ವಿತರಣೆ ಮಾಡಲಾಗಿದೆ. ಬಣವೆ ಸುಟ್ಟಿರುವವರಿಗೆ 10 ಸಾವಿರದಂತೆ ಒಟ್ಟು 40 ಸದಸ್ಯರಿಗೆ 4ಲಕ್ಷ ಹಾಗೂ 17 ಸಂಘದ ಸದಸ್ಯರಿಗೆ ವೈಧ್ಯಕೀಯ ವೆಚ್ಚವಾಗಿ 20 ಸಾವಿರದಂತೆ ಒಟ್ಟು 3.4 ಲಕ್ಷ ಅನುದಾನ ನೀಡಲಾಗಿದೆ. ಪಡ್ಡೆರಾಸು ಮರಣ ಪರಿಹಾರವಾಗಿ 144 ಜನರಿಗೆ 10 ಸಾವಿರದಂತೆ ಒಟ್ಟು 14.40 ಲಕ್ಷ ರೂಗಳು ಪರಿಹಾರ ನೀಡಲಾಗಿದೆ. ಸಂಘದ ಸದಸ್ಯರ ಮಕ್ಕಳ ವಿದ್ಯಾರ್ಥಿ ವೇತನ ಬಿ.ಇ, ಬಿ.ಟೆಕ್, ಬಿ.ಎಸ್.ಸಿ ಆಗ್ರಿ 95 ವಿಧ್ಯಾರ್ಥಿಗಳಿಗೆ 10 ಸಾವಿರಸದಂತೆ 9.5 ಲಕ್ಷ ರೂಗಳು ಹಾಗೂ ಬಿ.ವಿ.ಎಸ್.ಸಿ ಎಂ.ಬಿ.ಬಿ.ಎಸ್ ಓದುವ 32 ವಿಧ್ಯಾರ್ಥಿಗಳಿಗೆ 25 ಸಾವಿರದಂತೆ ಒಟ್ಟು 8 ಲಕ್ಷ ನೀಡಲಾಗಿದೆ. 2017 ರಿಂದ ಇದುವರೆಗೂ ತುಮುಲ್ ವತಿಯಿಂದ ಮಧುಗಿರಿ ತಾಲ್ಲೂಕಿನ 122 ವಿಧ್ಯಾರ್ಥಿಗಳಿಗೆ ಉಚಿತ ವಸತಿ ನಿಲಯದ ವ್ಯವಸ್ಥೆ ಕಲ್ಪಿಸಲಾಗಿದೆ

ಸಂಘದ ಸದಸ್ಯರಿಗೆ ರಾಸುಗಳ ವಿಮೆ ಲಾಭದಾಯಕ
2018-19 ರಲ್ಲಿ 6000 ರಾಸುಗಳಿಗೆ ವಿಮೆ ಮಾಡಿಸಿ ರೈತರಿಂದ 1.50 ಲಕ್ಷ ವಿಮಾ ಕಂಪನಿಗೆ ಕಟ್ಟಿದ್ದು 130 ಹಸುಗಳ ಮರಣ ಹೊಂದಿದ್ದು 65.0 ಲಕ್ಷ ರೂಗಳ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಿದೆ. 2019-20 ರಲ್ಲಿ ಒಟ್ಟು 19600 ರಾಸುಗಳಿಗೆ ವಿಮೆ ಮಾಡಿಸಿ ರೈತರಿಂದ 23.0 ಲಕ್ಷ ರೂಗಳನ್ನು ವಿಮಾ ಕಂಪನಿಗೆ ಕಟ್ಟಿದ್ದು 195 ರಾಸುಗಳು ಮರಣ ಹೊಂದಿದ್ದು 97.50 ಲಕ್ಷ ರೂ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಿದೆ. 2020-21 ರಲ್ಲಿ 12,600 ರಾಸುಗಳಿಗೆ ವಿಮೆ ಮಾಡಿಸಿ ರೈತರಿಂದ 31.50 ಲಕ್ಷ ರೂ ವಿಮಾ ಕಂಪನಿಗೆ ಕಟ್ಟಿದ್ದು 300 ರಾಸುಗಳು ಮರಣ ಹೊಂದಿದ್ದು 1.50 ಕೋಟಿ ರೂ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಿದೆ. 2021-22 ರಲ್ಲಿ 15500 ರಾಸುಗಳಿಗೆ ವಿಮೆ ಮಾಡಿಸಿ ರೈತರಿಂದ 38.75 ಲಕ್ಷ ರೂಗಳ ವಿಮಾ ಕಂಪನಿಗೆ ಕಟ್ಟಿದ್ದು ಮಾ 31 2022 ವರೆಗೆ 200 ರಾಸುಗಳು ಮರಣ ಹೊಂದಿದ್ದು 1.0 ಕೋಟಿ ರೂ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಗುಣಮಟ್ಟದ ವಿಚಾರದಲ್ಲಿ 1 ಮತ್ತು 2 ನೇ ಸ್ಥಾನದಲ್ಲಿದ್ದ ತುಮುಲ್ ಇದೀಗಾ 7 ನೇ ಸ್ಥಾನಕ್ಕೆ ಕುಸಿದಿದೆ. ಇತ್ತಿಚಿಗೆ ಕಳಪೆ ಫೀಡ್ ಪೂರೈಕೆ, ಕ್ವಾಲಿಟಿ ಫೀಡ್ ಸರಬರಾಜಾಗದ ಕಾರಣ ನಮ್ಮ ಒಕ್ಕೂಟದಲ್ಲಿ ಹಾಲಿನ ಗುಣಮಟ್ಟ ಕಳೆದುಕೊಂಡು ನಷ್ಠ ಅನುಭವಿಸಬೇಕಾಗಿದೆ. ಸರಕಾರ ನಿಗಧಿಪಡಿಸಿರುವ ಫ್ಯಾಟ್ 3.5 ಹಾಗೂ ಎಸ್.ಎನ್.ಎಫ್ 8.5 ಗುಣಮಟ್ಟದ ಹಾಲು ಪೂರೈಕೆಯಾಗುತ್ತಿಲ್ಲ. ರೈತರ ಸಹಾಯ ಧನ ಸಿಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ 1300 ಸಂಘದಲ್ಲಿ 1 ಸಾವಿರ ಸಂಘಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ತುಮುಲ್ ಎಂ.ಡಿ ಗಮನಕ್ಕೆ ತಂದರು ಸಹ ಎಂಡಿ ಅವರು ಕೆ.ಎಂ.ಎಫ್ ಅಡಿಯಲ್ಲಿ ಇರುವುದರಿಂದ ಅವರು ಅಲ್ಲಿ ಧ್ವನಿ ಎತ್ತುತ್ತಿಲ್ಲ ಇದರಿಂದ ರೈತರಿಗೆ ನಷ್ಟವಾಗುತ್ತಿದೆ.-ಕೊಂಡವಾಡಿ ಚಂದ್ರಶೇಖರ್ ತುಮುಲ್ ಮಾಜಿ ಅಧ್ಯಕ್ಷರು ಹಾಲಿ ನಿದೇರ್ಶಕರು

You may have missed