
ಮಧುಗಿರಿ: ತಾಲ್ಲೂಕಿನ ಐಡಿಹಳ್ಳಿ ಹೋಬಳಿಯ ದೊಡ್ಡದಾಳವಟ್ಟದ ಸಮುದಾಯಭವನದಲ್ಲಿ ಕುವೆಂಪು ರವರ ಆಶಯದಂತೆ ಸಂದ್ಯಾ ಅನಿಲ್ ರವರುಗಳ ಸರಳ ವಿವಾಹವಾದ ಮಂತ್ರ ಮಾಂಗಲ್ಯ ವಿವಾಹವನ್ನು ಆಯೋಜಿಸಲಾಗಿತ್ತು.
ಸಾಲ ಸೋಲದ ಸುಳಿಯಲ್ಲಿ ಆಗುವ ವಿವಾಹಗಳು ಕೊನೆಯ ವರೆವಿಗೂ ಸಾಲದ ಲೆಕ್ಕಾಚಾರದಲ್ಲಿಯೇ ಉಳಿದು ಕೊಳ್ಳುತ್ತವೆ. ಸಾಲದಲ್ಲಿ ನಡೆದ ವಿವಾಹಗಳಲ್ಲಿ ಉಂಡು ಹೋದ ನೆಂಟರು ಸಾಲ ತೀರಿಸುವಾಗ ಯರೊಬ್ಬರು ನೆರವಿಗೆ ಧಾವಿಸುವುದಿಲ್ಲ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಸಾಮಪ್ರಾದಾಯಿಕವಾಗಿ ನಡೆದ ವಿವಾಹಗಳಲ್ಲಿ ಇಂದೂ ಬಹಳ ವೈಷಮ್ಯತೆಗಳಿಂದ ಕೂಡಿರುವ ಸಾಧ್ಯತೆಗಳಿವೆ.
ಯುವಜನರು ತಮ್ಮ ವಿವಾಹದ ಬಗ್ಗೆ ತಂದೆ ತಾಯಿಗಳಲ್ಲಿ ತಿಳಿಸಿ ತಾವು ಇಷ್ಟಪಟ್ಟವರೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಿ.
ಕುವೆಂಪು ರವರ ಆಶಯದಲ್ಲಿ ಮಂತ್ರ ಮಾಂಗಲ್ಯವೆಂದರೆ ಗಂಡ ಹೆಂಡತಿ,ಕುಟುಂಬ, ಸಂಸಾರವನ್ನು ಜೋಡೆತ್ತುಗಳಾಗಿ ಸಮಾನವಾಗಿ ಕೊನೆಯ ವರೆವಿಗೂ ನಡೆಸಿಕೊಂಡು ಹೋಗುವುದಾಗಿದೆ. ಗಂಡು ಹೆಣ್ಣಿಗೆ ಏನೇನು ಕೊಡಬೇಕೆಂಬ ಲೆಕ್ಕಾಚಾರವನ್ನು ಬಿಟ್ಟು ಮದುವೆ ಮಾಡಿ ಎಂದು ಕರೆ ನೀಡಿದರು.
ಜಿಪಂ ಸದಸ್ಯರುಗಳಾದ ಶಾಂತಲಾರಾಜಣ್ಣ ಕೆಂಚಮಾರಯ್ಯ, ಪ್ರಗತಿಪರ ಚಿಂತಕರಾದ ಎನ್.ಮಹಾಲಿಂಗೇಶ್, ಕೊಟ್ಟಶಂಕರ್, ರಾಮಚಂದ್ರಪ್ಪ, ಶಾಂತರಾಮು, ಮಲ್ಲಿಗೆಸಿರಿಮನೆ, ಮುತ್ತುರಾಜು,ಡಿ.ಉಮಾಪತಿ, ಡಾ.ವಾಸು. ಸುನಿಲ್ ಶಿರಸಂಗಿ , ಗುಟ್ಟೆ ಆಶ್ಥತನಾರಾಯಣ, ದಾಸರಹಳ್ಳಿ ರಾಜು ಹಾಗೂ ಮತ್ತಿತರರು ಇದ್ದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು