web stats

Madhugirinews

#1NewsofMadhugiri

ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

ತುಮಕೂರು: 2022-23ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ, ತೆಂಗು ಅಭಿವೃದ್ಧಿ ಮಂಡಳಿ ಅನುದಾನಿತ ಕಾರ್ಯಕ್ರಮ, ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೆಂಗು ಅಭಿವೃದ್ಧಿ ಮಂಡಳಿಯು ಅನುದಾನಿತ ಕಾರ್ಯಕ್ರಮವನ್ನು ರೂಪಿಸಿ ಹೊಸದಾಗಿ ಗೇರು ಪ್ರದೇಶ ವಿಸ್ತರಣೆ ಬೆಳೆಗೆ ರೂ. 19636 ಹೆ, ತೆಂಗಿನಲ್ಲಿ ಅಂತರ ಬೆಳೆಯಾಗಿ ಕೋಕೋ ಬೆಳೆಗ್ಗೆ ರೂ. 16600/-ಹೆ, ಕಾಳುಮೆಣಸು ಬೆಳೆಗೆ ರೂ.14310/-ಹೆ, ಅಡಿಕೆ ಬೆಳೆಯಲ್ಲಿ ಕಾಳುಮೆಣಸು ಬೆಳೆಗೆ ರೂ. 44128/-ಹೆ, ದಾಳಿಂಬೆ ಹೊಸ ಪ್ರದೇಶ ವಿಸ್ತರಣೆಗೆ ರೂ. 17040/-ಹೆ ಹಾಗೂ ನುಗ್ಗೆ ಹೊಸ ಪ್ರದೇಶ ವಿಸ್ತರಣೆಗೆ ರೂ. 37935/-ಹೆ, ಸಹಾಯಧನ ನೀಡಲು ಅವಕಾಶವಿದೆ.
ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ವೈಯಕ್ತಿಕ ನೀರು ಸಂಗ್ರಹಣಾ ಘಟಕ 6500 ಘ.ಮೀ, ಸಾಮರ್ಥ್ಯಕ್ಕೆ 4ಲಕ್ಷ, ಸಂರಕ್ಷಿತ ಬೇಸಾಯ ಯೋಜನೆಯಡಿ ಪಾಲಿಥೀನ್ ಶೀಟ್ ಬದಲಾವಣೆ, ಹೂ/ತರಕಾರಿ ಗಿಡಗಳ ಬದಲಾವಣೆಗೆ ಸಹಾಯಧನ, ತೋಟಗಾರಿಕೆ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮ (ನೀರಿನಲ್ಲಿ ಕರಗುವ ರಸಗೊಬ್ಬರಗಳು, ಲಘುಪೋಷಕಾಂಶಗಳ ಮಿಶ್ರಣ, ಬೆಳೆ/ಹಣ್ಣು/ಹೂ ಹೊದಿಕೆಗಳಿಗೆ ಸಹಾಯಧನ, ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆಗೆ ಸಹಾಯಧನ, ಸುರಂಗ ಮಾದರಿಯಲ್ಲಿ ಹಸಿರು ಮನೆಗೆ ಸಹಾಯಧನ) ಹಾಗೂ ಕೋಯ್ಲೋತ್ತರ ನಿರ್ವಹಣಾ ಚಟುವಟಿಕೆಗಳಿಗೆ ಪ್ರೋತ್ಸಾಹ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನವನ್ನು ನೀಡಲಾಗುವುದು.
ಆಸಕ್ತ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಜೂನ್ 22, 2022ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತಾಲ್ಲೂಕು ಅನುಷ್ಠಾನಧಿಕಾರಿಗಳನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ತುಮಕೂರು ದೂ.0816-22797052, ಶಿರಾ : 08135-276310, ಕುಣಿಗಲ್ : 08132-221981, ತಿಪಟೂರು : 08134-251424, ಚಿಕ್ಕನಾಯಕನಹಳ್ಳಿ : 08133-267457, ಮಧುಗಿರಿ : 08137-282417, ತುರುವೇಕೆರೆ : 08139-288350, ಕೊರಟಗೆರೆ : 08138-232920 ಸೇರಿದಂತೆ ಪಾವಗಡ : 08136-244064ನ್ನು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may have missed