web stats

Madhugirinews

#1NewsofMadhugiri

ಗುಬ್ಬಿಯಲ್ಲಿ ಮತ್ತೊಂದು ದಲಿತರ ಕೊಲೆ ಪ್ರಕರಣ: ಭುಗಿಲೆದ್ದ ದಲಿತರ ಆಕ್ರೋಶ

ತುಮಕೂರು: ಗುಬ್ಬಿ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಲಿತ ಸಂಘರ್ಷ ಸಮಿತಿಯ ಸಂಚಾಲಕ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ (50) ವರ್ಷ ರವರ ಮೇಲೆ ಮಚ್ಚು-ಲಾಂಗುಗಳಿAದ ಹಲ್ಲೆನಡೆಸಿ ಭರ್ಬರವಾಗಿ ಹಾಡು ಹಗಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದ್ದು ಪಟ್ಟಣದ ಜನತೆ ಭಯಬೀತರಾಗಿದ್ದಾರೆ.

ಮಧ್ಯಾಹ್ನ ಸುಮಾರು 1 ಗಂಟೆಯ ಆಸುಪಾಸಿನ ಸಮಯದಲ್ಲಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ಸ್ನೇಹಿತರೊಡನೆ ಟೀ ಕುಡಿಯುತಿದ್ದಾಗ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಹತ್ಯೆಗೀಡಾದ ನರಸಿಂಹಮೂರ್ತಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರಾಗಿ ಹಾಗೂ ಶಾಸಕ ಎಸ್ ಆರ್ ಶ್ರೀನಿವಾಸ್ ಆಪ್ತರಾಗಿ ಗುರ್ತಿಸಿಕೊಂಡಿದ್ದರು. ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿರುವುದಿಲ್ಲ. ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಹಾಗೂ ಅಡಿಷನಲ್ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಘಟನಾಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿ ಸ್ಥಳ ಪರಿಶೀಲನೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ 3 ವಿಶೇಷ ತಂಡಗಳನ್ನು ರಚಿಸಿ ಹಂತಕರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗುಬ್ಬಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪಟ್ಟಣದ ಮಧ್ಯೆ ಹಾಡುವಾಗಲೇ ನಡೆದಿರುವ ಈ ಘಟನೆಯಿಂದ ಸಾರ್ವಜನಿಕರು ಹಾಗೂ ಪಟ್ಟಣದ ಜನತೆ ಬೆಚ್ಚಿ ಬಿದ್ದಿದಾರೆ. ಗುಬ್ಬಿಯಲ್ಲಿ ಸತತವಾಗಿ ದಲಿತರ ಮೇಲೆ ಹಲ್ಲೇ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯದಾಂತ್ಯ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಪತರು ನಾಡಿನಲ್ಲಿ ಮಚ್ಚು ಲಾಂಗಿನ ಸದ್ದು
ಪಾವಗಡ: ಗೃಹ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಕಲ್ಪತರು ಜಿಲ್ಲೆಯಲ್ಲಿ ದಲಿತರ ಕೊಲೆಗಳು ಹೆಚ್ಚಾಗುತ್ತಿವೆ, ಕೊಮುವಾದಿ ಸರಕಾರದ ಗೃಹ ಸಚಿವ ಅರಗ ಜ್ನಾನೇಂದ್ರರವರನ್ನ ಸಂಪುಟದಿAದ ವಜಾಗೋಳಿಸುವಂತೆ ದಲಿತಪರ ಸಂಘಟನೆಗಳಿAದ ಪಟ್ಟಣದ ತಹಶಿಲ್ದಾರ್ ಕಚೇರಿ ಮುಂದೆ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡಸಿದರು. ಅರಗ ಆರಗ ಜ್ಞಾನೇಂದ್ರ ಗೃಹ ಸಚಿವರಾದ ನಂತರ, ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ರಾಹುಲ್ ಕುಮಾರ್ ಬಂದಾ ನಂತರ ದಲಿತರ ಮೂರನೆ ಕೊಲೆ ಆರೋಪಿಗಳನ್ನ ಬಂದಿಸಲು ಸಾದ್ಯವಾಗ ಎಸ್ಪಿ ಜಿಲ್ಲೆ ಬಿಟ್ಟು ತೊಲಗಬೇಕು, ಅರಗ ಆರಗ ಜ್ಞಾನೇಂದ್ರರನ್ನು ಸಂಪುಟದಿAದ ವಜಾ ಮಾಡುವಂತೆ ಒತ್ತಾಯಸಿದರು.

You may have missed