web stats

Madhugirinews

#1NewsofMadhugiri

ಖತರ್ನಾಕ್ ಬೈಕ್ ಮತ್ತು ಸರಗಳ್ಳರು ಅಂದರ್

ತುಮಕೂರು: ಸರಣಿ ಸುಲಿಗೆ ಮಾಡುತ್ತಿದ್ದ ಅಂತರ್ ಜಿಲ್ಲಾ ಡಕಾಯಿತರು ತುಮಕೂರು ಪೊಲೀಸರು ಬಂಧಿಸಿ ಅಂದರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಲಕ್ಷ್ಮೀದೇವಮ್ಮ ಎಂಬ ಮಹಿಳೆ ಆಕ್ಸಿಸ್-125 ವಾಹನದಲ್ಲಿ ಕುಣಿಗಲ್-ತುಮಕೂರು ರಸ್ತೆಯಲ್ಲಿ ಬಾಣವಾರ ಗೇಟ್ ಸಮೀಪದಲ್ಲಿ ತುಮಕೂರು ಕಡೆಗೆ ಹೋಗುತ್ತಿದ್ದಾಗ ಈ ಇಬ್ಬರು ಆರಫಿಗಳು ಬೈಕ್ ಅನ್ನು ಹಿಂಬಾಲಿಸಿ ದ್ವಿಚಕ್ರವಾಹನದ ಹಿಂಬದಲ್ಲಿ ಕುಳಿತಿದ್ದ ಲಕ್ಷ್ಮೀದೇವಮ್ಮ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದರು ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಮೊ.ನಂ.75/2022 ಕಲಂ 392 ಐ.ಪಿ.ಸಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಗಾಗಿ ಕ್ಯಾತ್ಸಂದ್ರ ಸಿ.ಪಿ.ಐ ಚನ್ನೇಗೌಡಆರ್.ಜಿ. ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಒಟ್ಟು 14,45,000/- ರೂ ಮೌಲ್ಯದ ಚಿನ್ನಾಭರಣಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಕೆಎ-50- ಆರ್-3793 ನೇಪಲ್ಸರ್ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡು, ಸದರಿ ಆರೋಪಿಗಳ ಮೇಲೆ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರಗಳನ್ನು ಸಲ್ಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿದ್ದಾರೆ.

1. ಯತೀಶಬಿನ್ಲೇ|| ಸತೀಶ್, 26 ವರ್ಷ, ವಕ್ಕಲಿಗರು, ವಾಸದೀಪಾಂಜಲಿನಗರ, ಮೆಟ್ರೋಹಿಂಭಾಗ, ಮೈಸೂರುರಸ್ತೆ, ಬೆಂಗಳೂರು, ಸ್ವಂತಸ್ಥಳ: ದುಬೈನಗರ, ಬಾರ್ಲೈನ್ರೋಡ್, ಚಿಕ್ಕಮಗಳೂರು.
2. ಜಯಂತ್ @ ಬ್ಯಾಟರಿಜಯಂತ್ಬಿನ್ಚಿಕ್ಕರೇವಣ್ಣ, 23 ವರ್ಷ, ವಕ್ಕಲಿಗರು, ವಾಸ: ಆಲೂರು, ಸೋಲೂರುಹೋಬಳಿ, ಮಾಗಡಿತಾಲ್ಲೋಕು, ರಾಮನಗರಜಿಲ್ಲೆ
3. ಚಂದ್ರಶೇಖರ್ @ ಮಾಟ @ ಚಂದ್ರುಬಿನ್ವೆAಕಟೇಶ್, 26 ವರ್ಷ, ವಾಸ: ಭದ್ರಾಪುರ, ರಾಮನಗರತಾಲ್ಲೋಕುಮತ್ತುಜಿಲ್ಲೆ.

ಈ ಪ್ರಕರಣಗಳ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ತುಮಕೂರು ಜಿಲ್ಲೆಯ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಉದೇಶ್ಟಿ.ಜೆ, ಕೆ.ಎಸ್.ಪಿ.ಎಸ್. ಹಾಗೂ ಹೆಚ್.ಶ್ರೀನಿವಾಸ್ ಡಿ.ಎಸ್.ಪಿ.ತುಮಕೂರು ಉಪವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಕ್ಯಾತ್ಸಂದ್ರ ವೃತ್ತ ನಿರೀಕ್ಷಕರವರಾದ ಚನ್ನೇಗೌಡ ಆರ್.ಜಿ.ರವರ ನೇತೃತ್ವದಲ್ಲಿ ಹೆಬ್ಬೂರು ಪೊಲೀಸ್ ಠಾಣಾ ಪಿ.ಎಸ್.ಐ ದೇವಿಕಾದೇವಿ ಹಾಗೂ ಸಿಬ್ಬಂದಿಗಳಾದ ಕ್ಯಾತ್ಸಂದ್ರಪೊಲೀಸ್ಠಾಣೆಯಮೋಹನ್ಕುಮಾರ್ಮತ್ತುರಮೇಶ್ಕೆ. ಸುರೇಶ, ಬಸವರಾಜು, ಕಿಶೋರ್ಜೈನ್, ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು, ರಮೇಶ್ ಹಾಗೂಜಗದೀಶ ರವರುಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಶಹಾಪೂರ್ವಾಡ್, ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.

 

You may have missed