
ಮಧುಗಿರಿ: ಶಿಕ್ಷಕರೇ ಖುದ್ದು ವಿದ್ಯಾರ್ಥಿಗಳನ್ನು ವಸತಿ ಶಾಲೆಯಿಂದ ಹೊರಗಟ್ಟಿರುವ ಘಟನೆ ವರದಿಯಾಗಿದೆ.
ಹೌದು ಶಿಕ್ಷಣ ಸಚಿವರ ತರವಲ್ಲೇ ಇಂತಹ ಘಟನೆ ನಡೆದಿದ್ದು ವ್ಯಾಪಾಕ ಚರ್ಚೆಗೆ ಗ್ರಾಸವಾಗಿದೆ. ದೊಡ್ಡೇರಿ ಹೊಬಳಿಯ ಸೋದೇನಹಳ್ಳಿ ಗ್ರಾಮದಲ್ಲಿರುವ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದಿದ್ದು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ವಸತಿ ಶಾಲೆಯಿಂದ ಹೊರಗಟ್ಟಿ ಶಿಕ್ಷಣ ವಂಚಿತರಾಗುವAತೆ ತಾಲ್ಲೂಕಿನ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು 3ವಿದ್ಯಾರ್ಥಿಗಳು ಕಳೆದ 3ದಿನಗಳಿಂದ ಹೊರಗೆ ನಿಲ್ಲಿಸಿ ಅವಮಾನ ಮಾಡಿದ್ದಲ್ಲದೆ ಊಟ ತಿನ್ನಲಷ್ಟೇ ಬರುತ್ತೀರಾ ಎಂದು ಮೂದಲಿಸಿದ್ದಾರೆ.
ವಸತಿ ಶಾಲೆಯಲ್ಲಿ ಶಾಲೆಯಲ್ಲಿನ ಮಕ್ಕಳ ಕಲಿಕೆಯಲ್ಲಿ ಹಿಂದುಳಿದರೆ ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಪಾಠಪ್ರವಚನ ಮಾಡಬೇಕು. ಆದರೆ ಈ ಶಾಲೆಯಲ್ಲಿ ಕೆಲವು ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಾರದೆ ಮತ್ತು ಅಲ್ಲಿಯೇ ಉಳಿದುಕೆuಟಿಜeಜಿiಟಿeಜಳ್ಳದೆ ಓಡಾಡುತ್ತಿರುವುದರಿಂದ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಸತಿ ಶಾಲೆಯ ಹತ್ತನೇ ತರಗತಿಗೆ ದಾಖಲು ಮಾಡಿಕೊಳ್ಳದೆ ವಿನಾಕಾರಣ ಹೊರಗಟ್ಟಿ ಅವಮಾನಸಿದ್ದಾರೆ ಎನ್ನಲಾಗಿದೆ.
ಡಾ. ಅಂಬೇಡ್ಕರ್ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜಿ .ಪವನ್ ,ದೀಕ್ಷಿತ್ ಮತ್ತು ಭರತ್ ಎಂಬ ವಿಧ್ಯಾರ್ಥಿಗಳನ್ನು ಓದಕ್ಕೆ ಬರಲ್ಲ ಎಂದು ಹೇಳಿ ಕಳೆದ 3ದಿನಗಳಿಂದ ಹೊರ ನಿಲ್ಲಿಸಿದ್ದಾರೆ.
ಪೋಷಕರು ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಕರಗದ ಕಲ್ಲು ಮನಸ್ಸಿನ ಶಿಕ್ಷಕರು ನಿಮ್ಮ ಮಕ್ಕಳಿಗೆ ಊಟ ಹಾಕಲು ಯೋಗ್ಯತೆ ಇಲ್ಲವೇ ಇಲ್ಲಿ ಊಟಕ್ಕೆ ಕಳುಹಿಸುತ್ತಿದ್ದಿರಾ ಎಂದು ಅವಮಾನಿಸಿದ್ದಾರೆ. ದಬ್ಬೇಘಟ್ಟ ಸರ್ಕಾರಿ ಪ್ರೌಢಶಾಲೆಗೆ ಮೂವರು ಮಕ್ಕಳನ್ನು ದಾಖಲಿಸಲು ಪೋಷಕರು ಮತ್ತು ತಮ್ಮ ಕಷ್ಟಗಳನ್ನು ಇಲ್ಲಿನ ಶಿಕ್ಷಕರಿಗೆ ಹೇಳಿ ಶಾಲೆಗೆ ದಾಖಲಿಸಿದ್ದಾರೆ.
ಈ ರೀತಿ ವಸತಿ ಶಾಲೆಯಲ್ಲಿ ಒಬ್ಬರಿಗೊಂದು ಒಬ್ಬರಿಗೊಂದು ತಾರತಮ್ಯವೆಸಗುವುದಲ್ಲದೆ ಕೇವಲ ಇಬ್ಬರು ಶಿಕ್ಷಕರು ಮಾತ್ರ ಅಲ್ಲೆ ಉಳಿಯುತ್ತಾರೆ ಉಳಿದೆಲ್ಲ ಶಿಕ್ಷಕರು ಹೊರಗಿನಿಂದ ಸಮಯಕ್ಕೆ ಸರಿಯಾಗಿ ಬರದೆ ಪಾಠ ಪ್ರವಚನಗಳು ಸರಿಯಾಗಿ ಮಾಡದೆ ತೊಂದರೆಗೆ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬರಬೇಕೆಂದು ಇಂಥ ಕಲಿಕೆಯಲ್ಲಿ ಹಿಂದುಳಿದವರನ್ನು ಶಾಲೆಯಿಂದ ಹೊರ ಕಳುಹಿಸಿದರೆ ಉಳಿದ ಮಕ್ಕಳ ಫಲಿತಾಂಶದಿAದ ಶಾಲೆಗೆ ಒಳ್ಳೆಯ ಕೀರ್ತಿ ಬರುತ್ತದೆ ಎಂಬ ಏಕೈಕ ಉದ್ದೇಶದಿಂದ ಈ ರೀತಿ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು