web stats

Madhugirinews

#1NewsofMadhugiri

ಜೂ 20 ರಂದು ಹೊಸ ಪ್ಯಾಸೆಂಜರ್ ರೈಲು

ತುಮಕೂರು: ತುಮಕೂರು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ತುಮಕೂರು-ತಿಪಟೂರು-ಅರಸೀಕೆರೆ ಮತ್ತು ತುಮಕೂರು-ಯಶವಂತಪುರ-ಬಾಣಸವಾಡಿ ನಡುವೆ ಹೊಸ ಪ್ಯಾಸೆಂಜರ್ ರೈಲು ಸೇವೆಗೆ ಜೂ. ೨೦ ರಂದು ರೈಲ್ವೆ ಇಲಾಖೆ ಹಸಿರು ನಿಶಾನೆ ಸಿಗಲಿದೆ.
ಸಂಸದ ಜಿ.ಎಸ್. ಬಸವರಾಜು ಅವರು ದೆಹಲಿಯಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷ ತ್ರಿಪಾಠಿ ಅವರನ್ನು ಭೇಟಿ ಮಾಡಿ ಈ ಮಾರ್ಗಕ್ಕೆ ಎರಡು ಹೆಚ್ಚುವರಿ ರೈಲು ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿ ಚರ್ಚಿಸಿದ್ದರು. ಅಲ್ಲದೆ ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿ ಶ್ಯಾಮ್‌ಸಿಂಗ್ ಅವರನ್ನು ಭೇಟಿ ಮಾಡಿ ಸಂಸದರು ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತುಮಕೂರು-ತಿಪಟೂರು-ಅರಸೀಕೆರೆ ಮತ್ತು ತುಮಕೂರು-ಯಶವಂತಪುರ-ಬಾಣಸವಾಡಿ ನಡುವೆ ಹೊಸ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಜೂ. ೨೦ ರಂದು ತುಮಕೂರಿನ ರೈಲ್ವೆ ನಿಲ್ದಾಣದಲ್ಲಿ ಚಾಲನೆ ದೊರೆಯಲಿದ್ದು ಅಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಲವು ಹೊಸ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ

You may have missed