
ತುಮಕೂರು: ಹೊಸದುರ್ಗದಿಂದ ಅರತಕ್ಷತೆ ಮುಗಿಸಿಕೊಂಡು ಬರುತ್ತಿದ್ದ ಕುಟುಂಬವನ್ನು ಹಿಂಬಾಲಿಸಿದ ಕುಖ್ಯಾತರ ಅಂತರ ಜಿಲ್ಲಾ ಹೆದ್ದಾರಿ ದರೋಡೆಕೋರರು ದ್ವೀಚಕ್ರವಾಹನವನ್ನು ಅಡ್ಡಗಟ್ಟಿ ಓಡವೆಗಳನ್ನು ದೋಚಿ ಪರಾರಿಯಾಗಿದ್ದರು ಪೆ 5 ರಂದು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಸದರಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.


ಏನಿದು ಪ್ರಕರಣ:ಫೆ 5 ರಂದು ತಾವರೆಕೆರೆ ಗ್ರಾಮದ ವಾಸಿಗಳಾದ ಗೌತಮಿ, ಸೌಜನ್ಯ ಮತ್ತು ಶ್ರೀನಿವಾಸ ರವರು ತನ್ನ ಸ್ನೇಹಿತರ ಜೊತೆ ಹೊಸದುರ್ಗಕ್ಕೆ ಮದುವೆಗೆ ಕಾರಿನಲ್ಲಿ ಹೋಗಿ ಆರತಕ್ಷತೆ ಮುಗಿಸಿಕೊಂಡು ವಾಪಾಸ್ ತಾವರೆಕೆರೆಗೆ ಬರುತ್ತಿದ್ದಾಗ ಕಾರು ಕೆಟ್ಟು ಹೋಗಿದ್ದರಿಂದ ಪರ‍್ಯಾದಿ ಶ್ರೀನಿವಾಸ ತಾವರೆಕೆರೆಯಿಂದ ಒಂದು ಸ್ಕೂಟರ್ ತರಿಸಿಕೊಂಡು ಶ್ರೀನಿವಾಸ, ಗೌತಮಿ ಮತ್ತು ಸೌಜನ್ಯ ಮೂರು ಜನರು ಮಧ್ಯರಾತ್ರಿ ಸುಮಾರು 12-15 ಗಂಟೆ ಸಮಯದಲ್ಲಿ ಶಿರಾ ತಾಲ್ಲೂಕು ತಾವರೆಕೆರೆ ಪೊಲೀಸ್ ಠಾಣಾ ಸರಹದ್ದು ಮಾರಗನೆರೆ ಗ್ರಾಮದ ಸಮೀಪ ಹಿರಿಯೂರು ಶಿರಾ ರಾಷ್ಟಿçÃಯ ಹೆದ್ದಾರಿ 48 ರಲ್ಲಿ ಹೋಗುತ್ತಿದ್ದಾಗ ಹಿಂಬದಿಯಿAದ ಒಂದು ಬಿಳಿ ಬಣ್ಣದ ಮಹೇಂದ್ರ ಬಲೆರೋ ವಾಹನದಲ್ಲಿ 6-7 ಜನರು ಬಂದು ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮೂರು ಜನರನ್ನು ಅಡ್ಡಹಾಕಿ ರಾಡು, ಚಾಕುಗಳನ್ನು ಹಿಡಿದುಕೊಂಡು ಹೆದರಿಸಿ ಹಲ್ಲೆ ಮಾಡಿ ಗೌತಮಿ ರವರ ಕೊರಳಿನಲ್ಲಿದ್ದ ಸುಮಾರು 2 ಲಕ್ಷ ರೂ ಬೆಲೆ ಬಾಳುವ 43 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮತ್ತು 15 ಗ್ರಾಂ ತೂಕದ ಸಾದಾ ಚಿನ್ನದ ಸರವನ್ನು ಕಿತ್ತುಕೊಂಡು ವಾಹನ ಸಮೇತ ಪರಾರಿಯಾಗಿರುತ್ತಾರೆ.
ಆರೋಪಿ ಪತ್ತೆಗೆ ವಿಶೇಷ ತಂಡ
ಪ್ರಕರಣ ಸಂಬAಧ ತುಮಕೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಉದೇಶ್ ಕೆ.ಎಸ್.ಪಿ.ಎಸ್. ಮತ್ತು ಶಿರಾ ಉಪವಿಭಾಗದ ಉಪಾಧೀಕ್ಷಕರಾದ ಕುಮಾರಪ್ಪರವರ ಮಾರ್ಗದರ್ಶನದಂತೆ ಆರೋಪಿಯ ಪತ್ತೆ ಬಗ್ಗೆ ಸಿಪಿಐ ರವಿಕುಮಾರ್ ಸಿ. ಪಾಲಾಕ್ಷ ಪ್ರಭು, ಪಿ.ಎಸ್.ಐ. ಮತ್ತು ಸಿಬ್ಬಂದಿಗಳಾದ ಮಹೇಶ್, ರೇಣುಕ ಕೆ ಸಿ.ಪಿ.ಕಿರಣ್‌ಕುಮಾರ್, ಪ್ರಸಾದ್‌ಬಿ.ಕೆ. ಗೋಪಿನಾಥ, ಕರೆಪ್ಪ ಹುಲಗೇರಿ, ಬಾಬಾ ಗೌಡನವರ್ ಶಿರಾ ಠಾಣೆಯ ಮಂಜುನಾಥ, ರಮೇಶ್, ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು, ಜಗದೀಶ್, ರಮೇಶ್ ಮತ್ತು ಚಾಲಕ ಫಾರುಕ್ ರವರನ್ನೊಳಗೊಂಡ ವಿಶೇಷ ತಂಡವು ಆರೋಪಿಗಳ ಪತ್ತೆ ಬಗ್ಗೆ ಹೊರಜಿಲ್ಲೆಗಳಾದ ಹೊಸಪೇಟೆ, ಗದಗ, ಬಾಗಲಕೋm, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಿಸಿ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡಿ ಆರೋಪಿತರಿಂದ ತಾವರೆಕೆರೆ ಪೊಲೀಸ್ ಮೊ.ನಂ. 14/2022 ಕಲಂ 397 ಐಪಿಸಿ ಕೇಸಿನಲ್ಲಿ ದರೋಡೆಯಾಗಿದ್ದ 2 ಲಕ್ಷ ರೂ ಬೆಲೆ ಬಾಳುವ 43 ಗ್ರಾಂ, ತೂಕದ ಚಿನ್ನದ ಮಾಂಗಲ್ಯ ಸರ ಮತ್ತು 15 ಗ್ರಾಂ ತೂಕದ ಸಾದಾ ಸರವನ್ನು ವಶಪಡಿಸಿಕೊಂಡಿರುತ್ತಾರೆ. ಮಂಡ್ಯ ಜಿಲ್ಲೆ ಬೆಳ್ಳೂರು ಪೊಲೀಸ್ ಠಾಣಾ ಮೊ.ನಂ. 13/2022 ಕಲಂ 395,397,427 ಐಪಿಸಿ ಪ್ರಕರಣದಲ್ಲಿ ದರೋಡೆ ಮಾಡಿಕೊಂಡು ಹೋಗಿದ್ದ 5 ಲಕ್ಷ ರೂ ಬೆಲೆ ಬಾಳುವ ಮಹೇಂದ್ರ ಬಲೆರೋ ಪಿಕ್ ಅಪ್ ವಾಹನವನ್ನು ವಶಪಡಿಸಿಕೊಂಡು ಆರೋಪಿತರ ಮೇಲೆ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ. ಸದರಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಶಹಪೂರ್ ವಾಡ್ ರವರು ಅಭಿನಂದಿಸಿದ್ದಾರೆ.
ಈ ಆರೋಪಿಗಳು ಈ ಪ್ರಕರಣ ಅಲ್ಲದೆ ರಾಜ್ಯದ ಇನ್ನು ಮೂರು ಜಿಲ್ಲೆಯ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುತ್ತದೆ. ಬಂಧಿತ ಆರೋಪಿತರು ಭಾಗಿಯಾಗಿರುವ ಅಂತರ ಜಿಲ್ಲಾ ಹೆದ್ದಾರಿ ದರೋಡೆ ಪ್ರಕರಣಗಳ ವಿವರ
1) ತುಮಕೂರು ಜಿಲ್ಲೆ ಶಿರಾ ಪೊಲೀಸ್ ಠಾಣಾ ಮೊ.ನಂ. 30/22 ಕಲಂ 397,427 ಐಪಿಸಿ
2) ಮಂಡ್ಯ ಜಿಲ್ಲೆ ಬೆಳ್ಳುರು ಪೊಲೀಸ್ ಠಾಣಾ ಮೊ.ನಂ. 13/2022 ಕಲಂ 395,397,427 ಐಪಿಸಿ
3) ಕೊಪ್ಪಳ ಜಿಲ್ಲೆ ಮುನಿರಾಬಾದ್ ಪೊಲೀಸ್ ಠಾಣಾ ಮೊ.ನಂ. 42/2022 ಕಲಂ 395,397 ಐಪಿಸಿ
4) ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮಾಂತರ ಪೊಲಿಸ್‌ಠಾಣಾಮೊ.ನಂ.53/2022ಕಲA395,397,398 ಐಪಿಸಿ
5) ರಾಯಚೂರು ಜಿಲ್ಲೆ ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ.34/2022 ಕಲಂ 395,397 ಐಪಿಸಿ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು