
ಮಧುಗಿರಿ ನ್ಯೂಸ್ ಡೆಸ್ಕ್
ತುಮಕೂರು: ಕಲ್ಪತರು ನಾಡಿನಲ್ಲಿ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ರೈತರು ಭೂಮಿಯನ್ನು ಸ್ವಚ್ಛತೆ ಮಾಡಿ ಉಳಿಮೆ ಮಾಡಿ ಸಿದ್ಧಪಡಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ, ಸಾಮಾನ್ಯವಾಗಿ ಮೇ ಮಾಹೆಯಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತದೆ, ಭರಣಿ ಮಳೆ ಸುರಿದರೆ ಬರುವ ಬೆಳೆ ಚೆನ್ನಾಗಿರುತ್ತದೆ ಎಂಬುದು ರೈತರ ನಂಬಿಕೆಯಾಗಿದೆ.
ಈ ಬಾರಿ ಭರಣಿ ಮಳೆ ನಿರೀಕ್ಷೆಗಿಂತಲೂ ಮೀರಿ ಸುರಿದಿದ್ದು ರೈತರು ಉತ್ಸಾಹದಿಂದಲೇ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಮೇ ಆರಂಭದAದ ಮಳೆ ಬೀಳುತಿದ್ದು ವಾಯುಭಾರ ಕುಸಿತದಿಂದ ಮತ್ತಷ್ಟು ಮಳೆಯಾಗಿದ್ದು ಹವಾಮಾನ ಇಲಾಖೆಯ ಪ್ರಕರಾರ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದ್ದು ಕೃಷಿಗೆ ಸಹಕಾರಿಯಾಗಲಿದೆ.
ತುಮಕೂರು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿ ನಿರೀಕ್ಷೆಗಿಂತ ಚೆನ್ನಾಗಿ ಮಳೆಯಾಗುತಿದ್ದು ತುಮಕೂರು ತಾಲ್ಲೂಕಿನಲ್ಲಿ ಕಳೆದ ಎರಡು ವಾರದಲ್ಲಿ 145 ಮಿ.ಮೀ ಮಳೆಯಾಗಿದೆ. ಪಾವಗಡ ತಾಲ್ಲೂಕಿನಲ್ಲಿ ತೀರ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಸಾಧಾರಣವಾಗಿ ನಿನ್ನೆ ಇಂದ ಜಿಲ್ಲಾದ್ಯಾಂತ ಉತ್ತಮ ಮಳೆ ಬೀಳುತ್ತಿದೆ.

ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 669 ಮಿ.ಮೀ ಬೀಳಲಿದ್ದು, ಜಿಲ್ಲೆಯ ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು ವಾಡಿಕೆ ಮಳೆಗಿಂತ ವಾಸ್ತವಿಕವಾಗಿ 125.8 ಮಿ.ಮೀ ಮಳೆ ಬಿದ್ದಿದೆ. ವಾಡಿಕೆಗಿಂತ ಶೇ 86 ರಷ್ಟು ಅಧಿಕ ಮಳೆಯಾಗಿದೆ. ಏಪ್ರಿಲ್ ಕೊನೆ, ಮೇ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿರುವುದು ತೋಟಗಾರಿಕೆ ಬೆಳೆಗಳಿಗೂ ಸಹಕಾರಿಯಾಗಿದೆ.
ಈಗಾಗಲೇ ಉಳುಮೆ ಪೂರ್ಣಗೊಳಿಸಿದವರು ದ್ವಿದಳ ಧಾನ್ಯ ಬಿತ್ತನೆಗೆ ಮುಂದಾಗಿದ್ದಾರೆ. ಹೆಸರು, ಉದ್ದು, ಅಲಸಂದೆ, ಎಳ್ಳು ಬಿತ್ತನೆಗೆ ಚಾಲನೆ ಸಿಕ್ಕಿದೆ. ಪೂರ್ವ ಮುಂಗಾರಿನಲ್ಲಿ 14,150 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 1,386 2 ಹೆಕ್ಟರ್‌ಗಳಲ್ಲಿ ಮಾಡಲಾಗಿದೆ. ಕಳೆದ ನಾಲ್ಕೆöÊದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಈ ವಾರ 2 ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ಮುಂಗಾರು ಹಂಗಾಮಿಗೆ ಒಟ್ಟು 3.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಪ್ರತಿ ವರ್ಷ ಗೊಬ್ಬರ ಕೊರತೆ: ಹೆಚ್ಚುವರಿ ಬೆಲೆಗೆ ಮಾರಾಟ
ಡಿಎಪಿ ರಸಗೊಬ್ಬರ ಈ ಬಾರಿ ಕೊರತೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಗೊಬ್ಬರ ತಯಾರಿಕ ಕಚ್ಚಾ ವಸ್ತುಗಳ ಕೊರತೆ ಹಾಗೂ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ಇಂದ ಡಿಎಪಿ ಗೊಬ್ಬರ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೊರತೆ ಎದುರಾಗಲಿದೆ. ಮೇ ಅಂತ್ಯಕ್ಕೆ 8,326 ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆಯಿದ್ದು, ಬಾಕಿ ದಾಸ್ತಾನು ಸೇರಿದಂತೆ 19,539 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ಬೇಡಿಕೆಗೆ ಅನುಗುಣವಾಗಿ ಗೊಬ್ಬರ ತರಿಸಲಾಗುತ್ತದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಗೊಂಬರ ಅಂಗಡಿ ಮಾಲೀಕರು ಏಕಾಏಕಿ ಗೊಬ್ಬರ ಬೆಲೆ ಏರಿಕೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಮಳೆ ಬಿದ್ದ ಯಾವುದೆ ಮಾಹಿತಿ ಇಲ್ಲದೆ ಎಂ.ಆರ್.ಪಿ ಬೆಲೆಗಿಂತ ಹೆಚ್ಚಾಗಿ ಗೊಬ್ಬರ ಬೆಲೆಯಾಗಿದ್ದು ಈ ಬಗ್ಗೆ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ರೈತ ಯಾಕಾರರ್ಲಹಳ್ಳಿ ನರಸೇಗೌಡ ಆರೋಪಿಸಿದ್ದಾರೆ.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು