web stats

Madhugirinews

#1NewsofMadhugiri

ಮಧುಗಿರಿ ಮಾಣಿಕ್ಯ ಅಭಿವೃದ್ಧಿಯ ಹರಿಕಾರ ಸಹಕಾರಿ ರತ್ನ ಕೆ.ಎನ್ ರಾಜಣ್ಣ

ಮಧುಗಿರಿ ಅಭಿವೃದ್ಧಿಯ ಚಾಲೆಂಜಿಗ್ ರಾಜಕಾರಣಿ ಕೆ.ಎನ್ ರಾಜಣ್ಣ

ಈ ವಾರದ ವಿಶೇಷ ವ್ಯಕ್ತಿ ಪರಿಚ

ಮಧುಗಿರಿ ಎಂದಾಕ್ಷಣ ನೆನಪಿಗೆ ಬರುವುದೆ ಏಕಶಿಲಾ ಬೆಟ್ಟ ಅದು ಬಿಟ್ಟರೆ ಎತ್ತ ನೋಡಿದರು ಬರಡು ಭೂಮಿ, ಎತ್ತ ಸಾಗಿದರೂ ಆಳವಾದ ಗುಂಡಿಗಳ ರಸ್ತೆಗಳು ಎಂಬ ಮಾತಿತ್ತು. ಇಂತಹ ಸ್ಥಿತಿಯಲ್ಲಿ 2012-13 ರಲ್ಲಿ ಶಾಸಕರಾಗಿ ಆಯ್ಕೆಯಾದ ಕೆ.ಎನ್ ರಾಜಣ್ಣನವರು ಮಧುಗಿರಿ ಚಿತ್ರಣವನ್ನೇ ಬದಲಾಯಿಸಿದ್ದಾರೆ 

2013 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೆ.ಎನ್ ರಾಜಣ್ಣ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದರು, ಹದಗೆಟ್ಟು ರಸ್ತೆಗಳು, ನೀರಿಲ್ಲದೆ ಜನತೆಯ ಪರದಾಟ ಹೀಗೆ ಸಾಲು ಸಾಲು ಸಮಸ್ಯೆಯಿಂದ ಯಾರೂ ಸಹ ನಂಬಿರಲಿಲ್ಲ. ಹಿಂದುಳಿದ ಮಧುಗಿರಿಗೆ 2013 ರಲ್ಲಿ ಕೆ.ಎನ್.ರಾಜಣ್ಣ ಶಾಸಕರಾಗಿ ಆಯ್ಕೆಯಾಗಿ ಸುಮಾರು 1 ಸಾವಿರ ಕೋಟಿ ಅನುದಾನದ ಮೂಲಕ ಕ್ಷೇತ್ರದ ಅಭಿವೃದ್ಧಿಗೊಳಿಸಿದ್ದು, ಏಷ್ಯಾ ಖಂಡದಲ್ಲಿಯೇ ಪ್ರಥಮ ಏಕಶಿಲಾ ಬೆಟ್ಟಕ್ಕೆ ರೋಪ್‌ವೇ ಅಳವಡಿಸಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ನೂರು ಕೋಟಿ ರೂ ಘೋಷಿಸಿದ್ದರು ಆದರೆ ಪ್ರವಾಸೋಧ್ಯಮ ಹಾಗೂ ಪ್ರಾಚೀನ ಪುರಾತತ್ವ ಇಲಾಖೆ ನಿಧಾನಗತಿಯಿಂದ ಕಾಮಗಾರಿ ವಿಳಂಬವಾಗುತ್ತಿದೆ.

ಹೌದು ಸಹಕಾರಿ ಧುರಿಣ ಕೆ.ಎನ್ ರಾಜಣ್ಣನವರ ಅಧಿಕಾರದ ಅವಧಿಯಲ್ಲಿ ಎರಡು ಬಾರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಮಧುಗಿರಿಗೆ ಕರೆದು ಕ್ಷೇತ್ರದ ದರ್ಶನ ಮಾಡಿಸಿ ಸುಮಾರು 1 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಯಾರು ಏನೇ ಟೀಕೆ ಮಾಡಿದರೂ ಡೋಂಟ್ ಕೇರೆ ಎನ್ನುವ ರಾಜಣ್ಣ ಊಹೆಗೂ ನಿಲುಕದ ಕ್ರಾಂತಿಕಾರಿ ಬದಲಾವಣೆಯ ಮೂಲಕ ಮಧುಗಿರಿ ಮಾಣಿಕ್ಯ ಎನಿಸಿಕೊಂಡಿದ್ದಾರೆ.

ಇವರು ಶಾಸಕರಾಗಿದ್ದಾಗ ಹಳ್ಳಿ ಹಳ್ಳಿಗೂ ಸುಸಜ್ಜಿತವಾದ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು, ಶುದ್ದ ನೀರಿನ ಸೌಕರ್ಯ, ಸರಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ನೂತನ ಕೋರ್ಟ್ ನಿರ್ಮಾಣ, ತಾಪಂ ಕಚೇರಿ, ಎ.ಆರ್.ಟಿ,ಓ ಕಚೇರಿ, ಕೆ.ಎಸ್.ಆರ್.ಟಿ.ಸಿ ಡಿಪೋ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಡಿ.ಸಿ ಮತ್ತು ಎಸ್ಪಿ ಕಚೇರಿ ಹೊರತುಪಡಿಸಿ ಜಿಲ್ಲೆಗೆ ಪೂರಕ ವಾತವರಣವನ್ನು ನಿರ್ಮಿಸಿದ್ದಾರೆ. ರಾಜಕೀಯವಾಗಿ ಟಕ್ಕರ್ ಕೊಡುವ ಜಿಲ್ಲೆಯ ಏಕೈಕ ರಾಜಕಾರಣಿ ಕೆ.ಎನ್ ರಾಜಣ್ಣ, ಸಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ವಿರುದ್ಧ ತೊಡೆ ತಟ್ಟಿ ಘರ್ಜಿಸುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಸೂಲಿಸಿ ತನ್ನ ಶಕ್ತಿ ಏನೆಂಬುದು ಸಾಬಿತುಪಡಿಸಿದರು. ಇವರ ಗುಣ ಮತ್ತು ಛಲ ಅವರ ಹೇಳಿಕೆಗಳಿಂದ ತಾನು ನಿಷ್ಠರುವಾದರೂ ಪರವಾಗಿಲ್ಲ ಪಕ್ಷಕ್ಕಿಂದ ಮತದಾರರೇ ಮುಖ್ಯ, ತಪ್ಪು ಯಾರೆ ಮಾಡಲಿ ನೇರವಾಗಿ ಖಂಡಿಸುವ ಹಾಗೂ ಟೀಕಿಸುವ ಛಾತಿ ಇವರದ್ದು. ಹಾಲಿ ಪುರಸಭೆ, ಪಿಎಲ್ ಡಿ ಬ್ಯಾಂಕ್, ಎಂಪಿಎAಸಿ, ಟಿಎಪಿಎಂಸಿ, ತಾಲೂಕಿನ ಬಹುತೇಕ ಗ್ರಾಪಂಗಳು ಸೇರಿದಂತೆ ಎಲ್ಲಾ ಸ್ಥಳಿಯ ಸಂಸ್ಥೆಗಳು ಕಾಂಗ್ರೇಸ್ ಪಾಲಾಗಿದ್ದು ಮುಂದಿನ ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿಯಾಗಿದೆ.

2023 ಚುನಾವಣೆಯಲ್ಲಿ ಸಹಕಾರಿ ರತ್ನ ಕೆ.ಎನ್ ರಾಜಣ್ಣ ಗೆಲುವು ಬಹುತೇಕ ನಿಶ್ಚಿತವಾಗುವ ವಾತವರಣ ನಿರ್ಮಾಣವಾಗಿದೆ. ಶಾಸಕರಾಗಿ ಆಯ್ಕೆಯಾದರೆ ಮಧುಗಿರಿ ಜಿಲ್ಲಾ ಕೇಂದ್ರ, ಟೋಲ್‌ಗಳ ತೆರವು, ಮಧುಗಿರಿ ಬೆಟ್ಟಕ್ಕೆ ರೋಪ್ ವೇ, ಮಧುಗಿರಿಯನ್ನು ಪ್ರವಾಸೋದ್ಯಮ ಕೇಂಧ್ರವನ್ನಾಗಿಸುವುದು, ಕೈಗಾರಿಕೆ ಕೇಂದ್ರ ನಿರ್ಮಿಸುವ ಕನಸು ಹೊಂದಿದ್ದು, ಶಾಸಕರು ಮಾತ್ರವಲ್ಲದೆ ಸಹಕಾರಿ ಸಚಿವರಾಗುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂಬುದು ಕೆ.ಎನ್.ಆರ್. ಮತ್ತು ಆರ್.ಆರ್. ಅಭಿಮಾನಿಗಳ ಮಾತಾಗಿದೆ.

ರೈತರ ಕೈಹಿಡಿದ ರಾಜಣ್ಣ
ಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಆನ್ ಲೈನ್ ಮೂಲಕ ಪಾರದರ್ಶಕವಾಗಿ ರೈತರಿಗೆ ಬೆಳೆ ಸಾಲ ನಿಡುವ ಮೂಲಕ ತುಮಕೂರು ಡಿಸಿಸಿ ಬ್ಯಾಂಕ್ ರಾಜ್ಯಕ್ಕೆ ಮಾಧರಿಯಾಗಿದ್ದು ಸಹಕಾರ ಯೋಜನೆಗಳಗಾದ ಬಡವರ ಬಂಧೂ, ಪ.ಜಾತಿ ಮ್ತು ಪ.ಪಂಗಡದವರಿಗೆ ಸಾಲ ಸೈವಲಭ್ಯ, ರೈತರಿಗೆ ವಿವಿಧ ಬೆಳೆ ಸಾಲ ವಿತರಣೆ, ಸಾಲ ಪಡೆದ ರೈತ ಮೃತಪಟ್ಟರೆ 1ಲಕ್ಷದವರೆಗೆ ಸಾಲ ಮನನಾ ಮಾಡಿ ಋಣ ಮುಕ್ತ ಪತ್ರ ವಿತರಣೆ ಮಾಡುತ್ತಿದ್ದು ಈ ಮೂಲಕ ರೈತರ ಬೆನ್ನೆಲುಬಾಗಿದ್ದು ಇದರ ಜತೆ ತಾಲೂಕಿನಲ್ಲಿ ಇವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಇವರ ರಾಜಕೀಯಕ್ಕೆ ಶ್ರೀರಕ್ಷೆಯಾಗಿವೆ.

ತಂದೆಗೆ ತಕ್ಕ ಮಗ:ಕೆ.ಎನ್ ರಾಜಣ್ಣ ಅವರ ಪುತ್ರ ರಾಜ್ಯ ಯುವ ಕಾಂಗ್ರೇಸ್ ಉಪಾಧ್ಯಕ್ಷ ಆರ್. ರಾಜೇಂದ್ರ ತನ್ನ ತಂದೆಯ ಹೆಜ್ಜೆ ಗುರುತನ್ನು ಹಿಂಬಾಲಿಸುತ್ತಿದ್ದು ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಪಾಕ ಶಾಲೆ ಆರಂಭಿಸಿ ಸುಮಾರು 1ಲಕ್ಷ ಜನರಿಗೆ ಹಸಿವು ನೀಗಿಸಿದ್ದಾರೆ ಸದಾ ಹಸನ್ಮೂಖಿಯಾಗಿರುವ ರಾಜೇಂಧ್ರ ತನ್ನ ತಂದೆಯAತೆ ಒಂದಲ್ಲಾ ಒಂದು ರೀತಿ ಸಮಾಜ ಮುಖಿ ಕಾರ್ಯಕ್ರಮಗಳ ಖ್ಯಾತಿಯಾಗಿದ್ದಾರೆ, ಈ ಮೂಲಕ ಆರ್.ಆರ್ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.

 

 

 

ಗೋ ಶಾಲೆಯಿಂದ: ರೈತರ ಧ್ವನಿ ಕೆ.ಎನ್.ಆರ್         
ಮಧುಗಿರಿ ತಾಲೂಕು ಕಳೆದ ಹತ್ತು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿದೆ ಇಂತಹ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ರಾಜಣ್ಣ ಹೋಬಳಿಗೊಂದು ಗೋ ಶಾಲೆ ತೆರದರು, ಗೋ ಶಾಲೆಗೆ ಬರುವ ಗೋಪಾಲಕರಿಗೆ ತೊಂದರೆಯಾಗಬಾರದೆAದು ಗೋ ಶಾಲೆಯಲ್ಲೇ ಗೋಪಾಲಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು ಗೋಪಾಲಕರ ಹಸಿವು ನೀಗಿಸಿದ ಅನ್ನದಾತ ಎನಿಸಿಕೊಂಡಿದ್ದು ಇದೀಗಾ 5 ನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಇಂದಿಗೂ ರೈತರು ಇವರ ಸೇವೆಯನ್ನು ನೆನೆಯುತ್ತಾರೆ.

 

ಚೆಕ್ ಡ್ಯಾಂಗಳ ಸರದಾರ
ಮಧುಗಿರಿ ತಾಲ್ಲೂಕು ಮಳೆಯಾಶ್ರಿ ಬಯಲು ಸೀಮೆ ಪ್ರದೇಶವಾಗಿದ್ದು ಯಾವುದೆ ನೀರಾವರಿ ಯೋಜನೆಂತಹ ಶಾಶ್ವತ ಯೋಜನೆಗಳು ಪಡೆದುಕೊಂಡಿಲ್ಲಾ ಇಂತಹ ಸ್ಥಿತಿಯಲ್ಲಿ 2016-17 ನೇ ಸಾಲಿನಲ್ಲಿ ಶಾಸಕರಾಗಿದ್ದ ಕೆ.ಎನ್ ರಾಜಣ್ಣ ಇಚ್ಛಾಶಕ್ತಿಯಿಂದ ಕಾಳಾಜಿ ತೋರಿಸಿ ಜಯಮಂಗಲಿ ಮತ್ತು ಕುಮದ್ವತಿ ನದಿ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿಸಲು ಚೆಕ್ ಡ್ಯಾಂ ಮತ್ತು ಡೈಕ್ ನಿಮಾರ್ಣವಾಗಿದ್ದು ಸುತ್ತಮುತ್ತಲಿನ ರೈತರಲ್ಲಿ ಸಂತಸ ಮೂಡಿದೆ. ನೀರಿನ ಅಭಾವದಿಂದ ಹೊರ ಬರಲು ಸಣ್ಣ ನೀರಾವರಿ ಇಲಾಖೆಯು ಕಾಳೇನಹಳ್ಳಿ ಮತ್ತು ವೀರಾಪುರದ ಬಳಿ ಸುಮಾರು 1.5 ಕೋಟಿ ವೆಚ್ಚದಲ್ಲಿ ಬಳಿ ಚೆಕ್ ಡ್ಯಾಂ ನಿರ್ಮಿಸಿದ್ದು ಕೊರಟಗೆರೆ ಭಾಗದಿಂದ ಜಯಮಂಗಲಿ ತುಂಬಿ ಹರಿದರೆ ಈ ಭಾಗದ ನೀರಿನ ವೇದನೆ ನೀಗಿಸುವಂತಾಗುತ್ತದೆ. ಗಡಿ ಭಾಗಕ್ಕೆ ಅನುಕೂಲವಾಗುವಂತೆ ತೆರಿಯೂರು ಗ್ರಾಮದಲ್ಲಿ 1ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ಮತ್ತು ಸುತ್ತ ಮುತ್ತ ಡೈಕ್‌ಗಳನ್ನು ನಿರ್ಮಿಸಿದ್ದು ಚೆಕ್ ಡ್ಯಾಂ ಮೂಲಕ ಸುತ್ತಲಿನ ಕೆರೆಗಳಿಗೆ ನೀರು ಹರಿಸಲು ಸಂಪರ್ಕ ಕಲ್ಪಿಸಲಾಗಿದೆ, ಕೊಡಿಗೇನಹಳ್ಳಿ ಭಾಗದಲ್ಲೂ 5.5 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ.

ಹೋಬಳಿಗೊಂದು ಡಿಸಿಸಿ ಬ್ಯಾಂಕ್ ಶಾಖೆ:
ಈ ಭಾಗವು ಮಳೆಯಾಶ್ರಿ ಪ್ರದೇಶವಾಗಿದ್ದು ಆಗೊಮ್ಮೆ ಈಗೊಮ್ಮೆ ಮಳೆ ಬಿದ್ದಾಗ ರೈತರು ತಮ್ಮ ಓಡವೆಗಳನ್ನು ಖಾಸಗಿ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಕೃಷಿಗೆ ಬಂಡವಾಳ ಹಾಕುತ್ತಿದ್ದರು, ಹಾಕಿದ ಬಂಡವಾಳ ಹಿಂತಿರುಗಿ ಬಾರದಿದ್ದಾಗ ಮೀಟರ್ ಬಡ್ಡಿ ಹಾಗೂ ಗೋಲ್ಡ್ ಲೋನ್ ನೀಡುವ ಸಂಸ್ಥೆಗಳ ಸುಲಿಗೆಗೆ ಸಿಲುಕಿ ಅದೆಷ್ಟೋ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರು, ಇದನ್ನು ತಪ್ಪಿಸಿ ರೈತರ ಕೈ ಹಿಡಿಯಬೇಕೆಂಬ ಉದ್ದೇಶದಿಂದ ಹೋಬಳಿಗೊಂದು ಡಿಸಿಸಿ ಬ್ಯಾಂಕ್ ಶಾಖೆ ತೆರದು ಕಡಿಮೆ ಬಡ್ಡಿ ದರದಲ್ಲಿ ಗೋಲ್ಡ್ ಲೋನ್ ನೀಡುವ ಮೂಲಕ ಒಂದಷ್ಟು ಸಡಲಿಕೆ ನಿಯಮಗಳ ರೈತರಿಗೆ ಬೆನ್ನೆಲುಬಾದರು, ಕ್ಷೇತ್ರದಲ್ಲಿ ಪಹಣಿ ಹೊಂದಿದ್ದ ಪ್ರತಿಯೊಬ್ಬ ರೈತನಿಗೆ ಪಕ್ಷಾತೀತವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೃಷಿ ಸಾಲ ನೀಡಿದ್ದು ಇಂದಿಗೂ ರೈತರ ಸಬಲತೆ ಕಾರಣವಾಗಿದೆ.

ಬಡವರ ಪರ ಯೋಜನೆಗಳು
ಡಿಸಿಸಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ, ಸಾಲ ಪಡೆದ ರೈತ ಮೃತಪಟ್ಟರೆ ಒಂದು ಲಕ್ಷದ ವರೆಗೆ ಮನ್ನಾ, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ಶಾಸಕರಾಗಿದ್ದಾಗ ಶೋ ಭಾಗ್ಯ, ವಿಧ್ಯಾರ್ಥಿಗಳ ಮನೆಗೆ ವಿಧ್ಯುತ್ ಸಂಪರ್ಕ ಕಲ್ಪಿಸಿದ್ದು ಇಂತಹ ಅನೇಕ ಜನಪರ ಯೋಜನೆಗಳ ಮೂಲಕ ಮಧುಗಿರಿ ಮಾಣಿಕ್ಯ ಎನಿಸಿಕೊಂಡಿದ್ದಾರೆ, ಇಂತಹ ಹತ್ತು ಹಲವು ಯೋಜನೆಗಳ ಮೂಲಕ ಹೊಸ ಇತಿಹಾಸ ಬರೆದ ರಾಜಣ್ಣ ಸಹಕಾರಿ ರತ್ನ ಎಂದೇ ಬಿರುದು ಪಡೆದುಕೊಂಡಿದ್ದಾರೆ

 

ಕೆಎನ್‌ಆರ್ ವಿಡಿಯೋಗಳಿಗಾಗಿ ಈ ಕೆಳಕಂಡ ಲಿಂಕ್ ಓಪನ್ ಮಾಡಿ.

You may have missed