
ಮಧುಗಿರಿ ನ್ಯೂಸ್ ಡೆಸ್ಕ್
ವಿಶ್ವ ಪರಿಸರ ದಿನ ಕೇವಲ ಆಚರಣೆ ಮತ್ತು ಭಾಷಣೆಕ್ಕೆ ಸೀಮಿತವಾಗದೆ ಪರಿಸರ ಉಳಿಸುವ ಪ್ರಯತ್ನಗಳು ಸತತವಾಗಿ ನಡೆದಾಗ ಮಾತ್ರ ವಿಶ್ವ ಪರಿಸರ ದಿನಕ್ಕೆ ಅರ್ಥ ಬರುತ್ತದೆ ಎಂದು ಗ್ರಾಪಂ ಅಧ್ಯಕ್ಷ ಅಶ್ವತ್ಥನಾರಯಣ ತಿಳಿಸಿದರು.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ದೊಡ್ಡಮಾಲೂರು ಸರಕಾರಿ ಶಾಲೆಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರದ ಬಗ್ಗೆ ಯಾವುದೇ ಕಾಳಜಿ ವಹಿಸದೇ ಭಾಷಣಗಳಿಗೆ ಸೀಮಿತವಾಗಿ ಬಿಟ್ಟಿದೆ. ಅನಂತರ ಪರಿಸರವು ನೆನಪಾಗಬೇಕೆಂದರೆ ಮುಂದಿನ ವರ್ಷದ ಜೂನ್ 5 ಬರಬೇಕು. ಇದು ಇಂದಿನ ಸ್ಥಿತಿ. ಶಾಲೆಗಳಲ್ಲಿ ಸಣ್ಣ ತರಗತಿಗಳಿಂದಲೇ ಪಠ್ಯಗಳಲ್ಲಿ ಪರಿಸರದ ಬಗ್ಗೆ ಮಾಹಿತಿ ನೀಡುವ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ವಾರದಲ್ಲಿ ಒಂದು ಅವಧಿಯಾದರೂ ಪರಿಸರದ ಬಗ್ಗೆ ಮಾಹಿತಿ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಪರಿಸರದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಶಿಕ್ಷಕಿ ಗಂಗಾAಬಿಕೆ ಮಾತನಾಡಿ ಗಿಡ ಮರಗಳು ಬೆಳೆಸಲು ಸ್ವತಃ ಜಮೀನು ಬೇಕಿಲ್ಲ, ಕನಿಷ್ಠ ಮನೆಯ ಮುಂದೆ ಒಂದು ಹಣ್ಣಿನ ಅಥವ ಹೂವಿನ ಗಿಡವನ್ನು ಕಡ್ಡಾಯವಾಗಿ ಪ್ರತಿ ವಿದ್ಯಾರ್ಥಿಯು ಪೋಷಣೆ ಮಾಡಿದಾಗ ಮಾತ್ರ ಪರಿಸರ ಸಂರಕ್ಷಿಸಿದAತಾಗುತ್ತದೆ, ಪರಿಸರ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಹೊಣೆ ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಯಿಸಿಲ್ಲ. ಈ ದಿನಕ್ಕಿರುವ ಮಹತ್ವವನ್ನು ಪ್ರತಿಯೊಬ್ಬ ವ್ಯಕ್ತಿ ತಿಳಿಯಬೇಕಾಗಿದೆ ಮುಂದಿನ ಪೀಳಿಗೆಯ ಉಳಿವಿಗೆ ಪರಿಸರದ ರಕ್ಷಣೆ ಅತ್ಯಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಾಮಾಂಜಿನಮ್ಮ ನಾಗಭೂಷಣ, ವಲಯ ಮೇಲ್ವಿಚಾರಕ ಸುಬ್ರಮಣ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪಟೇಲ್ ಸಂಜೀವಗೌಡ್ ಮಾಜಿ ಅಧ್ಯಕ್ಷ ರಾಮಾಂಜನಪ್ಪ, ಪಿಎಸೈ ರವಿ ಟಿ, ಮುಖ್ಯ ಶಿಕ್ಷಕಿ ಗಂಗಾAಬಿಕೆ, ಗ್ರಾಪಂ ಸದಸ್ಯರಾದ ಅರುಣಾ ವೆಂಕಟೇಶ್, ಸಿಂಧು ಲಿಂಗೇಗೌಡ, ಸೇವಾ ಪ್ರತಿನಿಧಿಗಳಾದ ನವೀನ್ ಕುಮಾರ್, ಲಕ್ಷ್ಮೀದೇವಮ್ಮ, ನರಸಪ್ಪ, ಪಾಪಮ್ಮ ಹಾಜರಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://youtu.be/1VR7hxJGXh0

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು