web stats

Madhugirinews

#1NewsofMadhugiri

ಸಾರ್ವಜನಿಕ ಆಸ್ಪತ್ರೆಗೆ ನ್ಯಾಯಾಧೀಶರ ದಿಢೀರ್ ಭೇಟಿ

ಕೊರಟಗೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಿವಿಲ್ ನ್ಯಾಯಾಧೀಶರಾದ ಜೆ.ಎನ್. ಶ್ರೀನಾಥ್ ರವರು ದಿಢೀರ್ ಭೇಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಂದ ಚಿಕಿತ್ಸೆಯ ಬಗ್ಗೆ ಮಾಹಿತಿ ಮತ್ತು ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯದ ಬಗ್ಗೆ ಮುಖ್ಯ ವೈದ್ಯರಿಂದ ಅಂಕಿ ಅಂಶದ ವರದಿಯನ್ನು ಕಲೆ ಹಾಕಿದ್ದಾರೆ.

ಕರ್ನಾಟಕ ಕಾನೂನು ಸೇವೆ ಪ್ರಾಧಿಕಾರದ ಅದ್ಯಕ್ಷರು ಹಾಗೂ ಉಚ್ವ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಬಿ.ವೀರಪ್ಪ ನಿರ್ದೇಶನದ ಮೇರೆಗೆ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜೆ.ಎಂಎಪ್ ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಜೆ.ಎನ್.ಶ್ರೀನಾಥ್ ರವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಂಡ ,ಸಿಬ್ಬಂದಿಗಳ ಅಂಕಿ ಅಂಶದ ಮಾಹಿತಿ ಕಲೆ ಹಾಕಿದ ನಂತರ ಔಷಧಿ ಮತ್ತು ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿನ ಪ್ರತಿ ವಿಭಾಗಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿನ‌ ವೈದ್ಯಕೀಯ ವಿಭಾಗದ ಅಂಕಿ ಅಂಶದ ವರದಿಯನ್ನು ಪಡೆದು ಉಚ್ಚ ನ್ಯಾಯಾಲಯದ ನ್ಯಾಯಾಲಯಕ್ಕೆ ವರದಿಯನ್ನು ಕಳುಹಿಸಿದ್ದಾರೆ.

You may have missed