
ಮಧುಗಿರಿಯಲ್ಲಿ ರಾಜೀವ್ ಗಾಂಧಿ ಕ್ರೀಡಾಂಗಣದ ಹಿಂಭಾಗದ ಜಮೀನಿನಲ್ಲಿ ಸುಮಾರು 30 ಕೋತಿಗಳನ್ನು ಜಮೀನಿನ ಮಾಲೀಕ ಕುಮಾರ್ ಅವರು ಕೋತಿಗಳನ್ನು ತೆಂಗಿನ ತೋಟದಲ್ಲಿ ಹಿಡಿದು ಬೋನ್ ನಲ್ಲಿ ಬಂಧಿಸಿದ ಘಟನೆ ನಡೆದಿದೆ.
ಹಿಂಸೆ ತಾಳಲಾರದೆ ಪರಸ್ಪರ ಕಿತ್ತಾಡಿಕೊಂಡ ಕೋತಿಗಳಲ್ಲಿ ಒಂದು ಕೋತಿ ಗಂಭೀರ ಗಾಯಗೊಂಡಿದೆ. ಕೋತಿಗಳು ಪ್ರಾಣ ಹಿಂಸೆಯಿಂದ ನರಳುತ್ತಿರುವುದನ್ನು ಕಂಡ ವಾಲ್ಮೀಕಿ ನಗರದ ಯುವಕರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.
ವಿಷಯ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೋನಿನಲ್ಲಿ ಬಂಧಿಸಿದ್ದ ಕೋತಿಗಳನ್ನು ಸ್ವತಂತ್ರವಾಗಿ ಬದುಕಲು ದಾರಿ ಮಾಡಿಕೊಟ್ಟಿರುತ್ತಾರೆ ಮಧುಗಿರಿಯ ವಾಟರ್ ಬಳಿ ಇರುವ ತೋಟದ ಮಾಲೀಕರು ಕೋತಿಗಳನ್ನು ಹಿಡಿದು ಹಿಂಸಿಸುತ್ತಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ https://youtube.com/shorts/cMIohYs5ORY?feature=share

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು