ಮಧುಗಿರಿ ನ್ಯೂಸ್: ಇತಿಹಾಸದಲ್ಲಿ ಅತ್ಯಂತ ಕುಗ್ರಾಮವಾದ ಸೂರನಾಗೇನಹಳ್ಳಿಯಿಂದ ಇದುವರೆಗೂ ನಮ್ಮ ಉಪ್ಪಾರ ಸಮುದಾಯದವರು ಯಾರೊಬ್ಬರೂ ಕೂಡ ಅಧ್ಯಕ್ಷರಾಗಿರಲಿಲ್ಲ ಆದರೆ ಈ ಬಾರಿ ನಮ್ಮ ಸಮುದಾಯಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು ನೂತನ ಗ್ರಾಪಂ ಅಧ್ಯಕ್ಷ ಎಸ್.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಹೋಬಳಿಯ ದೊಡ್ಡಮಾಲೂರು ಗ್ರಾಪಂನಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್.ಎನ್. ಅಶ್ವತ್ಥನಾರಾಯಣ ಹಾಗೂ ಉಪಾಧ್ಯಕ್ಷೆಯಾಗಿ ಪಾರ್ವತಮ್ಮ ಅವಿರೋಧವಾಗಿ ಆಯ್ಕೆಯಾಗಿ ನಂತರ ಮಾತನಾಡಿದ ಅವರು ಮಾಜಿ ಶಾಸಕ ಕೆ.ಎನ್. ರಾಜಣ್ಣ, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಅವರ ಆಶೀರ್ವಾದದಿಂದ ಅಧ್ಯಕ್ಷನಾಗಿದ್ದು, ನನ್ನ ಅಧಿಕಾರವಧಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೀವಿಕ ಸಂಜೀವಮೂರ್ತಿ, ಮಾಜಿ ತಾಪಂ ಸದಸ್ಯ ಜೆ.ಡಿ. ವೆಂಕಟೇಶ್, ಗ್ರಾಪಂ ಸದಸ್ಯರಾದ ಪಂಚಾಕ್ಷರಯ್ಯ, ರಾಜಪ್ಪ, ಅರುಣ ವೆಂಕಟೇಶ್, ರೂಪ ನಾಗೇಂದ್ರಪ್ಪ, ಭಾಗ್ಯಮ್ಮ ಬಸವರಾಜು, ರಾಮಾಂಜಿನಮ್ಮ ನಾಗಭೂಷಣ್, ಗಂಗಾಧರ್ ನಾಯ್ಕ್, ಪಿಡಿಒ ಶಿವಾನಂದಯ್ಯ ಕಲಿದೇವಪುರ ರಾಜಶೇಖರ್ ರೆಡ್ಡಿ, ಮೆಡಿಕಲ್ ಮದನ್ ಗೋಪಾಲರೆಡ್ಡಿ, ಉಪ್ಪಾರ ಸಮುದಾಯದ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ತಾಲ್ಲೂಕು ಸಂಘದ ಅಧ್ಯಕ್ಷ ದಾಸಪ್ಪ ಹಾಜರಿದ್ದರು.
More Stories
ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಕಿವಿಗೂಡಬೇಡಿ-: ಹಾಲಪ್ಪ
ಕ್ರಿಕೆಟ್ ಎಂಬುದು ಯುವ ಸಮೂಹಕ್ಕೆ ಸ್ಪೂರ್ತಿದಾಯಕ
TUMKUR ಜಿಲ್ಲೆ ಚಿರತೆ ಕಾರ್ಯಪಡೆಗೆ 59 ಸಿಬ್ಬಂದಿ: ಈಶ್ವರ ಖಂಡ್ರೆ